ಕೊಚ್ಚಿ: ಕೊರೋನಾ ಚಿಕಿತ್ಸೆಗಾಗಿ ದುಬಾರಿ ದರವನ್ನು ವಿಧಿಸುವ ಖಾಸಗೀ ಆಸ್ಪತ್ರೆಗಳ ಬಗ್ಗೆ ಹೈಕೋರ್ಟ್ ಕಿಡಿಕಾರಿದೆ. ಖಾಸಗಿ ಆಸ್ಪತ್ರೆಗಳು ಸರ್ಕಾರದ ಆದೇಶಗಳನ್ನು ಪಾಲಿಸದಿರುವುದರಿಂದ ಸರ್ಕಾರವು ಈ ನಿಟ್ಟಿನಲ್ಲಿ ಸಮಯೋಚಿತವಾಗಿ ನೀತಿಯನ್ನು ರೂಪಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕೊರೋನಾ ಚಿಕಿತ್ಸೆಯ ಸೋಗಿನಲ್ಲಿ ಖಾಸಗೀ ಆಸ್ಪತ್ರೆಗಳು ಲಾಭ ಗಳಿಸುವ ಯತ್ನದಲ್ಲಿರುವ ಬಗ್ಗೆ ನ್ಯಾಯಾಲಯ ಟೀಕಿಸಿತು. ಕೊರೋನಾ ಚಿಕಿತ್ಸಾ ದರವನ್ನು ಏಕೀಕರಿಸುವಂತೆ ಕೋರಿ ಹೈಕೋರ್ಟ್‍ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಮಂಗಳವಾರ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಈ ವಿಷಯ ತಿಳಿಸಿದರು.
ಖಾಸಗಿ ಆಸ್ಪತ್ರೆಗಳು ಅತಿಯಾದ ದರವನ್ನು ವಿಧಿಸುವ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ಹಲವಾರು ಕಾರಣಗಳನ್ನೊಡ್ಡಿ ಆಸ್ಪತ್ರೆಗಳು ಅಮಿತ ಶುಲ್ಕ ವಿಧಿಸುತ್ತಿವೆ. ಆಸ್ಪತ್ರೆಯು ಪ್ರತಿ ರೋಗಿಗೆ ದಿನಕ್ಕೆ ಎರಡು ಪಿಪಿಇ ಕಿಟ್‍ಗಳನ್ನು ವಿದಿಸಲಾಗುತ್ತಿದೆ. ಚಿಕಿತ್ಸೆಯ ವಾರ್ಡ್‍ನಲ್ಲಿ ಒಂದೇ ಪಿಪಿಇ ಕಿಟ್ ಧರಿಸಿದ ಆರೋಗ್ಯ ಕಾರ್ಯಕರ್ತರು ಐವತ್ತು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಐವತ್ತು ರೋಗಿಗಳಿಂದ ಎರಡು ಕಿಟ್‍ಗಳನ್ನು ವಿಧಿಸಲಾಗುತ್ತಿದೆ ಎಂದು ತೋರುತ್ತದೆ. ಪ್ರತಿ ರೋಗಿಯಿಂದ ಎರಡು ಕಿಟ್‍ಗಳ ಶುಲ್ಕ ವಿಧಿಸಲಾಗುತ್ತದೆ ಎಂದು ನ್ಯಾಯಾಲಯ ಕೇಳಿದೆ.
ಕೆಲವು ಖಾಸಗಿ ಆಸ್ಪತ್ರೆಗಳು ದಿನಕ್ಕೆ 10,000 ರಿಂದ 20,000 ವರೆಗೆ ಶುಲ್ಕ ವಿಧಿಸುತ್ತವೆ. ಈ ಆಸ್ಪತ್ರೆಗಳ ಹೆಸರನ್ನು ಪ್ರಸ್ತುತ ಉಲ್ಲೇಖಿಸುತ್ತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ್ದು, ಪ್ರಸ್ತುತ ಪರಿಸ್ಥಿತಿ ಗಂಭೀರವಾಗಿದೆ ಮತ್ತು ಸರ್ಕಾರ ಇದನ್ನು ಪರಿಶೀಲಿಸಬೇಕು ಎಂದು ಸೂಚಿಸಿತು. ಈಗ ಪರಿಸ್ಥಿತಿ ನಿರ್ಣಾಯಕವಾಗಿದೆ. ಈ ಸಮಯದಲ್ಲಿ ಹೆಚ್ಚಿನ ದರವನ್ನು ವಿಧಿಸುವ ಕ್ರಮ ಸ್ವೀಕಾರಾರ್ಹವಲ್ಲ. ಆದ್ದರಿಂದ ಈ ಬಗ್ಗೆ ಪರಿಶೀಲನೆ ನಡೆಸುವಂತೆ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿತು.





