ತಿರುವನಂತಪುರ: ಮುಂದಿನ ಐದು ದಿನಗಳಲ್ಲಿ ರಾಜ್ಯದಲ್ಲಿ ಕೊರೋನಾ ರೋಗಿಗಳ ಸಂಖ್ಯೆ ಎರಡು ಲಕ್ಷದಿಂದ ಮೂರು ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರತಿನಿತ್ಯದ ರೋಗಿಗಳ ಸಂಖ್ಯೆ ಮತ್ತು ಚಿಕಿತ್ಸೆ ಪಡೆಯುವ ರೋಗಿಗಳ ಸಂಖ್ಯೆ 10 ದಿನಗಳಲ್ಲಿ ದ್ವಿಗುಣಗೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಸೋಂಕಿತರ ಸಂಖ್ಯೆ ಕನಿಷ್ಠ 5 ದಿನಗಳವರೆಗೆ ದ್ವಿಗುಣಗೊಳ್ಳುವ ಅಂಕಿಅಂಶಗಳ ಸ|ಊಚನೆ ಆತಂಕಕ್ಕೆ ಕಾರಣವಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಮಾರ್ಚ್ 25 ರ ಹೊತ್ತಿಗೆ 2,18,893 ಮಂದಿ ಕೋವಿಡ್ ಸೋಂಕಿತರಿದ್ದರು. ಬಳಿಕದ ಐದು ದಿನಗಳ ನಂತರ ರೋಗಿಗಳ ಸಂಖ್ಯೆ 303733 ತಲುಪಿತ್ತು. ಪ್ರಸ್ತುತ 28 ರಷ್ಟಿರುವ ಪರೀಕ್ಷಾ ಸಕಾರಾತ್ಮಕ ದರವು ಶೇ. 35 ಕ್ಕಿಂತ ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ, ಐಸಿಯುನಲ್ಲಿ 1952 ರೋಗಿಗಳು ಮತ್ತು ವೆಂಟಿಲೇಟರ್ನಲ್ಲಿ 722 ಮಂದಿ ರೋಗಿಗಳಿದ್ದಾರೆ. ಹಾಸಿಗೆಗಳ ಸಂಖ್ಯೆಯನ್ನು ಗರಿಷ್ಠಗೊಳಿಸಲು ಪ್ರಯತ್ನಿಸಲಾಗುತ್ತಿದೆ. ರಾಜ್ಯವು ಪ್ರಸ್ತುತ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 50 ಹಾಸಿಗೆಗಳನ್ನು ಮೀಸಲಿರಿಸಿ ಚಿಕಿತ್ಸೆ ನೀಡುತ್ತಿದೆ.





