ಕೊಚ್ಚಿ: ಕೋವಿಡ್ ತಪಾಸಣೆಯ ಹೆಸರಿನಲ್ಲಿ ಜನರೊಂದಿಗೆ ಕೆಟ್ಟದಾಗಿ ವರ್ತಿಸದಂತೆ ಹೈಕೋರ್ಟ್ ಪೋಲೀಸರಿಗೆ ನಿರ್ದೇಶನ ನೀಡಿದೆ. ಮಾಸ್ಕ್ ಧರಿಸದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು, ಆದರೆ ಇದು ದೈಹಿಕ ಹಾನಿ ಅಥವಾ ದುಷ್ಕೃತ್ಯಕ್ಕೆ ಕಾರಣವಾಗಬಾರದು ಎಂದು ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ಮಾಸ್ಕ್ ಧರಿಸಿಲ್ಲ ಎಂದು ಆರೋಪಿಸಿ ಎರ್ನಾಕುಳಂ ಮುನಾಂಬಮ್ ಪೋಲೀಸ್ ಠಾಣಾ ವ್ಯಾಪ್ತಿಯ ಪೋಲೀಸರು ಜನರನ್ನು ವಶಕ್ಕೆಡ ಪಡೆದು ಹಲ್ಲೆನಡೆಸಿದರೆಂದು ಆರೋಪಿಸಿ ಕೋಝಿಕ್ಕೋಡ್‍ನ ಕಾರು ಚಾಲಕರಾದ ವೈಶಾಕ್ ಎಂಬವರು ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಏಪ್ರಿಲ್ 16 ರಂದು ಮುನಾಂಬಮ್ ಬಸ್ ನಿಲ್ದಾಣ ಪರಿಸರದಲ್ಲಿ ಇಬ್ಬರು ಪೋಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಫಿರ್ಯಾದಿ ಹೇಳಿಕೊಂಡಿದ್ದಾರೆ. ಘಟನೆಯ ತನಿಖೆ ನಡೆಸಿ ತಕ್ಷಣ ವರದಿ ಸಲ್ಲಿಸುವಂತೆ ನ್ಯಾಯಾಲಯ ಡಿಜಿಪಿಗೆ ನಿರ್ದೇಶನ ನೀಡಿತು.





