ಬದಿಯಡ್ಕ: ವೇದಗಳ ಅಧ್ಯಯನ, ಪಠನದಿಂದ ದೇವ ಸಾನಿಧ್ಯ ವೃದ್ಧಿಯಾಗುವುದು. ಪೌರೋಹಿತ್ಯ ವೃತ್ತಿಗಾಗಿ ವೇದಾಧ್ಯಯನ ಸೀಮಿತವಾಗಬಾರದು. ವೇದಾಧ್ಯಯನ ಪೂರೈಸಿದವರು ಮಾತ್ರವೇ ಪೌರೋಹಿತ್ಯ ಕಾರ್ಯವನ್ನು ಕೈಗೊಳ್ಳಬೇಕೆಂದು ಎಡನೀರು ಶ್ರೀ ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ಕರೆ ನೀಡಿದರು .
ಶ್ರೀ ಮಠದಲ್ಲಿ ಹೊಸತಾಗಿ ಆರಂಭಗೊಂಡ ಯಜುರ್ವೇದ ವೇದಪಾಠ ಶಾಲೆಯನ್ನು ಭಾನುವಾರ ದೀಪ ಬೆಳಗಿಸಿ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
.ಕಾರ್ಯಕ್ರಮದಲ್ಲಿ ಕಿಳಿಂಗಾರು ನಡುಮನೆ ಗೋಪಾಲಕೃಷ್ಣ ಭಟ್, ಚಕ್ರಪಾಣಿ ದೇವಪೂಜಿತ್ತಾಯ, ಗೋಪಾಲ ಕೃಷ್ಣ ಅಡಿಗ, ಶಿವರಾಂ ಭಟ್, ಉಡುಪುಮೂಲೆ ರಾಘವೇಂದ್ರ ಭಟ್, ರಾಜೇಂದ್ರ ಕಲ್ಲೂರಾಯ, ಸತೀಶ್ ರಾವ್, ಸೂರ್ಯ ಭಟ್ ಎಡನೀರು, ಯಲ್ಲಾಪುರ ಶ್ರೀಕೃಷ್ಣ ಭಟ್, ರಾಘವೇಂದ್ರ ಕೆದಿಲಾಯ ಮೊದಲಾದವರು ಉಪಸ್ಥಿತರಿದ್ದರು.





