ಉಪ್ಪಳ: ಕೇರಳ ರಾಜ್ಯ ಶಿಕ್ಷಣ ಇಲಾಖೆ ನಡೆಸಿದ ನೇಶನಲ್ ಮೀನ್ಸ್ ಕಂ ಮೆರಿಟ್ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಪೈವಳಿಕೆನಗರ ಸರ್ಕಾರಿ ಹಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಧನ್ಯಶ್ರೀ ಎನ್ ಎಸ್ ತೇರ್ಗಡೆ ಹೊಂದಿ ಸ್ಕಾಲರ್ ಶಿಪ್ ಗೆ ಅರ್ಹತೆ ಹೊಂದಿದ್ದಾಳೆ. ಪೈವಳಿಕೆ ಏದಾರು ನಿವಾಸಿ ನಾರಾಯಣ ವೈ - ಶೈಲಜ ದಂಪತಿ ಸುಪುತ್ರಿಯಾದ ಧನ್ಯಶ್ರೀ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.





