HEALTH TIPS

ಲಸಿಕೆ ಕುರಿತು ಕೆಲವರು ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ: ಮನ್‌ಸುಖ್‌ ಮಾಂಡವೀಯ

             ನವದೆಹಲಿ: 'ಜನರಲ್ಲಿ ಆತಂಕ ಮೂಡಿಸುವ ಸಲುವಾಗಿ ಕೆಲವರು ಕೋವಿಡ್‌ ಲಸಿಕೆಯ ಕೊರತೆ ಇದೆ ಎಂಬಂಥ ಅನಗತ್ಯ ಹೇಳಿಕೆಗಳನ್ನು ನೀಡುತ್ತಿದ್ದಾರೆ' ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಬುಧವಾರ ಹೇಳಿದರು.

            ಲಸಿಕೆಯ ಕೊರತೆ ಇದೆ ಎಂಬ ಬಗ್ಗೆ ಕೆಲವು ರಾಜ್ಯಗಳಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿರುವ ಅವರು, 'ತಮ್ಮ ಬಳಿ ಲಸಿಕೆಯ ಎಷ್ಟು ಡೋಸ್‌ಗಳಿವೆ, ಎಷ್ಟು ಪೂರೈಕೆಯಾಗಲಿದೆ ಎಂಬ ಬಗ್ಗೆ ಆಯಾ ರಾಜ್ಯಗಳಿಗೆ ಗೊತ್ತಿದೆ' ಎಂದು ಅವರು ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.

           'ಲಸಿಕೆಯ ಡೋಸ್‌ಗಳನ್ನು ಹಂಚಿಕೆಯ ಬಗ್ಗೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮುಂಚಿತವಾಗಿಯೇ ಮಾಹಿತಿ ನೀಡುತ್ತಿದೆ. ಜನರಿಗೆ ಲಸಿಕೆ ನೀಡುವಲ್ಲಿ ಅಸಮರ್ಪಕ ನಿರ್ವಹಣೆ, ಲಸಿಕೆಗಾಗಿ ಉದ್ದನೆಯ ಸಾಲುಗಳನ್ನು ಕಾಣಬಹುದು. ಈ ವಿದ್ಯಮಾನ ನೋಡಿದರೆ ಸಮಸ್ಯೆ ಎಲ್ಲಿ ಇದೆ ಹಾಗೂ ಇದಕ್ಕೆ ಯಾರು ಕಾರಣ ಎಂಬುದು ಸ್ಪಷ್ಟವಾಗುತ್ತದೆ' ಎಂದೂ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

             ರಾಜಸ್ಥಾನ, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರಗಳಲ್ಲಿ ಸೋಮವಾರ ಹೊಸದಾಗಿ ಕೋವಿಡ್‌-19ನ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಲಸಿಕೆಯ ಕೊರತೆ ಬಗ್ಗೆ ಈ ರಾಜ್ಯಗಳು ದೂರಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries