HEALTH TIPS

ಓಣಂ ಕಿಟ್ : ಎ.ಎ.ವೈ. ಕಾರ್ಡ್ ದಾರರಿಗಿರುವ 30311 ಕಿಟ್ ಗಳು ಪಡಿತರ ಅಂಗಡಿಗಳಿಗೆ ಸರಬರಾಜು

         ಕಾಸರಗೋಡು: ಕೋವಿಡ್ ಮಹಾಮಾರಿಯ ದ್ವಿತೀಯ ಅಲೆಯ ವೇಳೆಯೂ ಸಾರ್ವಜನಿಕರು ಸಾಂತ್ವನ ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಘೋಷಿಸಿರುವ ಓಣಂ ಕಿಟ್ ವಿತರಣೆ ಕಾಸರಗೋಡು ಜಿಲ್ಲೆಯಲ್ಲೂ ಪ್ರಗತಿಯಲ್ಲಿದೆ. 

                           ಜಿಲ್ಲೆಯ 389 ಪಡಿತರ ಅಂಗಡಿಗಳ ಮೂಲಕ 327772 ಕಿಟ್ ಗಳು ವಿತರಣೆಗಾಗಿ ತಲಪಿವೆ. ಇವುಗಳಲ್ಲಿ ಎ.ಎ.ವೈ. ಕಾರ್ಡ್ ದಾರರಿಗೆ ಇರುವ 30311 ಕಿಟ್ ಗಳು ಸಿದ್ದಗೊಂಡು ಪಡಿತರ ಅಂಗಡಿಗಳಿಗೆ ತಲಪಿವೆ. 105237 ಕಿಟ್ ಗಳು ಬಿ.ಪಿ.ಎಲ್. ಕಾರ್ಡುದಾರರಿಗೆ, 102365 ಕಿಟ್ ಗಳು ನೀಲ ಕಾರ್ಡುದಾರರಿಗೆ, 89752 ಕಿಟ್ ಗಳು ಬಿಳಿ ಕಾರ್ಡು ದಾರರಿಗೆ ಮುಂದಿನ ದಿನಗಳಲ್ಲಿ ಲಭಿಸಲಿವೆ. 

                         ಎ.ಎ.ವೈ. ಕಾರ್ಡ್ ದಾರರಿಗೆ ಓಣಂ ಕಿಟ್ ಆ.3ರಂದು ಪಡಿತರ ಅಂಗಡಿಗಳಿಗೆ ತಲಪಿವೆ. ಏಲಕ್ಕಿ, ಗೇರುಬೀಜ ಸಹಿತ ಸಾಮಾಗ್ರಿಗಳು ತಲಪಿದ ತಕ್ಷಣ ಬಿ.ಪಿ.ಎಲ್ ಕಾರ್ಡುದಾರರಿಗೂ, ಆದ್ಯತೆ ಪಟ್ಟಿಯಲ್ಲಿರುವ ಮಂದಿಗೂ ಕಿಟ್ ವಿತರಣೆ ಪೂರ್ತಿಗೊಳ್ಳಲಿದೆ ಎಂದು ಜಿಲ್ಲಾ ಸಪ್ಲೈ ಆಫೀಸರ್ ಕೆ.ಎನ್.ಬಿಂದು ತಿಳಿಸಿದರು. ಓಣಂ ಕಿಟ್ ನಲ್ಲಿರುವ ಸಾಮಾಗ್ರಿಗಳ ತಪಾಸಣೆ, ಕಿಟ್ ಪ್ಯಾಕಿಂಗ್ ಮಾನಿಟರಿಂಗ್ ಗಾಗಿ ಜಿಲ್ಲಾ ಮಟ್ಟದಲ್ಲಿ ಸಿಬ್ಬಂದಿಯ ತಂಡವೊಂದು ನೇಮಕಗೊಂಡಿದೆ. 

ಠಿ-2                                15 ಆಹಾರ ವೈವಿಧ್ಯಗಳನ್ನು ಸಾರ್ವಜನಿಕ ಪೂರೈಕೆ ಇಲಾಖೆ ನೇತೃತ್ವದಲ್ಲಿ ವಿತರಣೆ ನಡೆಸುವ ಓಣಂ ಕಿಟ್ ನಲ್ಲಿ ಅಳವಡಿಸಲಾಗಿದೆ. ತಲಾ ಅರ್ಧ ಕಿಲೋ ತೆಂಗಿನೆಣ್ಣೆ, ಪಚ್ಚೆಹೆಸರು, ಕಾಲುಕಿಲೋ ತೊಗರಿ ಬೇಳೆ, ತಲಾ 100 ಗ್ರಾಂ ಚಹಾಪುಡಿ, ಮೆಣಸು/ ಮೆಣಸಿನ ಪುಡಿ, ಹಳದಿ, ತಲಾ ಒಂದು ಕಿಲೋ ಸಕ್ಕರೆ, ಉಪ್ಪು, ಒಂದು ಕಿಲೋ ಗೋಧಿ ಪುಡಿ, ಒಂದು ಸ್ನಾನದ ಸಾಬೂನು ಇತ್ಯಾದಿಗಳಲ್ಲದೆ 100 ಗ್ರಾಂ ಪಾಯಸದ ಸೇಮಿಗೆ/ 100 ಗ್ರಾಂ ಪಾಯಸದ ಅಡ/ ಅರ್ಧ ಕಿಲೋ ಉಣಕ್ಕ ಅಕ್ಕಿ, 50 ಗ್ರಾಂ ಗೇರುಬೀಜ ಬೇಳೆ, 20 ಗ್ರಾಂ ಏಲಕ್ಕಿ, 50 ಎಂ.ಎಲ್. ತುಪ್ಪ, 100 ಗ್ರಾಂ ಸಕ್ಕರೆ ಬೆರಟಿ/ ಚಿಪ್ಸ್ ಕಿಟ್ ನಲ್ಲಿದೆ. ಬಟ್ಟೆ ಚೀಲದಲ್ಲಿ ಕಿಟ್ ಸಿದ್ಧಗೊಳ್ಳುತ್ತಿದೆ. ಸಕ್ಕರೆ ಬೆರಟಿಯನ್ನು ಕುಟುಂಬಶ್ರೀ ತಯಾರಿಸಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries