HEALTH TIPS

ಕೇವಲ ಒಂದು ವರ್ಷ ಹತ್ತು ತಿಂಗಳ ಹರೆಯ: ಇಂಡಿಯನ್ ಬುಕ್ ಆಫ್ ರೆಕಾರ್ಡ್‍ಗೆ ಸೇರಿದ ಕಾಸರಗೋಡಿನ ಮಗು!

    

               ಕಾಸರಗೋಡು: ದಾಖಲೆ ನಿರ್ಮಿಸುವುದು ಸಾಮಾನ್ಯದ ಸಾಧನೆಯಲ್ಲ. ನಿರಂತರ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ಜನರು ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಾರೆ. ಇತ್ತೀಚೆಗೆ ಕಾಸರಗೋಡಿನ ಪುಟ್ಟ ಪ್ರತಿಭೆ ತಮ್ಮ ಹೆಸರನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೆ ಸೇರಿಸಿದ್ದಾರೆ. ಚೆರ್ಕಳದ ವಿ.ಕೆ.ಪಾರಾದ ಜಯೇಶ್ ಮತ್ತು ಬಿಂದುಜಾ ದಂಪತಿಯ ಪುತ್ರಿ ಶಾನ್ವಿಕಾ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದ್ದಾರೆ. ಶಾನ್ವಿಗೆ ಒಂದು ವರ್ಷ ಹತ್ತು ತಿಂಗಳು ಹರೆಯ.

                  ಶಾನ್ವಿಕಾ ತನ್ನ ಬೆರಗುಗೊಳಿಸುವ ಸಾಮಥ್ರ್ಯಕ್ಕಾಗಿ ದಾಖಲೆ ನಿರ್ಮಿಸಿದ್ದಾಳೆ.  ಶಾನ್ವಿಕಾ ಇಂಗ್ಲಿಷ್ ಮತ್ತು ಮಲಯಾಳಂನಲ್ಲಿ ತಿಂಗಳುಗಳ ಹೆಸರನ್ನು ದೋಷವಿಲ್ಲದೆ ಉಚ್ಚರಿಸುತ್ತಾಳೆÀ. ಬಾಲಕಿ ಇಂಗ್ಲಿಷ್ ವರ್ಣಮಾಲೆಯನ್ನು ಕಂಠಪಾಠದೊಂದಿಗೆ ಸಂಭ್ರಮದಿಂದ ಒಪ್ಪಿಸಬಲ್ಲಳು. ಇಂಗ್ಲಿಷ್ ಮತ್ತು ಮಲಯಾಳಂನಲ್ಲಿ 1 ರಿಂದ 10 ರವರೆಗೆ ಎಣಿಸಲೂ ಸೈ. 

               ಐದು ಜಿಕೆ ಪ್ರಶ್ನೆಗಳು ಮತ್ತು ದೇಹದ ಅಂಗಗಳ ಹೆಸರನ್ನು ಶಾನ್ವಿಕಾ ಕಂಠಪಾಠ ಮಾಡಿದ್ದಾಳೆ. ಶಾನ್ವಿಕಾ ಅದ್ಬುತ ಪ್ರತಿಭೆ. ಯೂಟ್ಯೂಬ್ ಥಂಬ್‍ನೇಲ್ ನೋಡಿ ಶಾನ್ವಿಕಾ ಯಾವುದೇ ಹಾಡನ್ನು ಗುರುತಿಸಬಲ್ಲಳು. ಪ್ರಾಣಿಗಳ ಶಬ್ದವನ್ನು ಅನುಕರಿಸುವುದು ಹೇಗೆಂದು ಆಕೆಗೆ ಸುಲಲಿತ.  ಈ ಎಲ್ಲ ಬಹುಮುಖ ಪ್ರತಿಭೆಗಳನ್ನು ಪರಿಗಣಿಸಿ ಶಾನ್ವಿಕಾ ಇಂಡಿಯನ್ ಬುಕ್ ಆಫ್ ರೆಕಾಡ್ರ್ಸ್ ಗೆ ಸೇರ್ಪಡೆಯಾಗಿದ್ದಾಳೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries