HEALTH TIPS

ಗ್ರಾಮೀಣ ಭಾಗದಲ್ಲಿ ಕಲೆ ಮತ್ತು ಕ್ರೀಡಾ ಸಾಮಥ್ರ್ಯ ಪ್ರಜ್ವಲಿಸಲಿ: ಶಾನವಾಸ್ ಪಾದೂರು: ರೆಡ್ ಸ್ಟಾರ್ ಕನಿಯಾಲ ಆಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್ ಉದ್ಘಾಟಿಸಿ ಮಾತನಾಡಿದ ಕಾಸರಗೋಡು ಜಿ.ಪಂ ಉಪಾಧ್ಯಕ್ಷ

  

               ಉಪ್ಪಳ: ಗ್ರಾಮೀಣ ಭಾಗದಲ್ಲಿ ಕ್ರೀಡಾ ಸಾಮಥ್ರ್ಯವನ್ನು ಪೆÇೀಷಿಸಲು ಮತ್ತು ಕಲಾಸಕ್ತರನ್ನು ಪೆÇ್ರೀತ್ಸಾಹಿಸಲು ಯುವಜನ ಕ್ಲಬ್ಬುಗಳು, ಸಂಘಟನೆಗಳು ಬಹಳ ಸಹಕಾರಿ ಮತ್ತು ಪರಿಣಾಮಕಾರಿಯಾಗಿವೆ. ಇಂತಹ ಸಂಘಟನೆಗಳಿಂದ ಯಶಸ್ವಿ ಸಾಧಕರು ಬೆಳೆದು ನಾಡಿಗೆ ಹೆಮ್ಮೆ ತರಲಿ ಎಂದು ಕಾಸರಗೋಡು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು ಹೇಳಿದರು. 

         ಬಾಯಾರು ಸಮೀಪದ ಕನಿಯಾಲದಲ್ಲಿ ನೂತನವಾಗಿ ನಿರ್ಮಾಣಗೊಂಡ ರೆಡ್ ಸ್ಟಾರ್ ಕನಿಯಾಲ ಆಟ್ರ್ಸ್ ಅಂಡ್ ಸ್ಪೋಟ್ರ್ಸ ಕ್ಲಬ್ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. 


              ಜಿಲ್ಲೆಯ ಹಲವೆಡೆ ಇರುವ ನೂರಾರು ಕ್ಲಬ್ಬುಗಳು ಯುವಜನರನ್ನು ಕ್ರೀಡೆ ಮತ್ತು ಕಲೆಯತ್ತ ಆಕರ್ಷಿಸಿದೆ. ಇಂತಹ ಚಟುವಟಿಕೆಗಳಿಂದ ಕಬಡ್ಡಿ, ಕ್ರಿಕೆಟ್ ಸೇರಿದಂತೆ ಇತರ ಕ್ರೀಡೆಗಳಿಗೆ ಹೆಚ್ಚಿನ ಪೆÇ್ರೀತ್ಸಾಹ, ಉತ್ತೇಜನ ದೊರಕುತ್ತಿದೆ ಎಂದರು.

            ಪೈವಳಿಕೆ ಗ್ರಾ.ಪಂ ಸದಸ್ಯೆ ಮಮತಾ ಪೂಜಾರಿ ಸ್ಥಳೀಯ ಕ್ಲಬ್ ಆಯೋಜಿಸಿದ ಕಬಡ್ಡಿ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪೈವಳಿಕೆ ಗ್ರಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಝೆಡ್.ಎ ಕಯ್ಯಾರು,  ಸಾಮಾಜಿಕ ಕಾರ್ಯಕರ್ತ ಅಶ್ವಥ್ ಪೂಜಾರಿ ಲಾಲ್ ಭಾಗ್, ಸ್ಥಳೀಯ ನೇತಾರ ಪುರುಷೋತ್ತಮ ಬಳ್ಳೂರ್ ಶುಭ ಹಾರೈಸಿದರು. ಮೊಹಮ್ಮದ್ ಕರ್ವಜೆ, ಆದಂ ಕನಿಯಾಲ, ಅಬ್ದುಲ್ ರಹಿಮಾನ್,  ಮಾಜಿ ಗ್ರಾ.ಪಂ ಸದಸ್ಯ ಗೋವಿಂದ ಭಟ್, ರೆಡ್ ಸ್ಟಾರ್ ಕ್ಲಬ್ ಅಧ್ಯಕ್ಷ ಹಸೈನಾರ್ ಕರ್ವಜೆ, ಕಾರ್ಯದರ್ಶಿ ಸಲೀದ್ ಅಬ್ದುಲ್ಲಾ, ಸದಸ್ಯರಾದ ರತ್ನಾಕರ, ವಿಜಯ, ಮುರ್ಷಿ ಮೊದಲಾದವರು ಇದ್ದರು. ಸಭಾ ಕಾರ್ಯಕ್ರಮ ಆರಂಭಕ್ಕೂ ಮುನ್ನ ರೆಡ್ ಸ್ಟಾರ್ ಕ್ಲಬ್ಬಿನ ನೂತನ ಕಟ್ಟಡವನ್ನು ರಿಬ್ಬನ್ ತುಂಡರಿಸುವ ಮೂಲಕ ಜಿ.ಪಂ ಉಪಾಧ್ಯಕ್ಷ ಶಾನವಾಸ್ ಪಾದೂರು ಉದ್ಘಾಟಿಸಿದರು. ಪೈವಳಿಕೆ ಗ್ರಾ.ಪಂ ಅಧ್ಯಕ್ಷೆ ಜಯಂತಿ, ಝೆಡ್.ಎ ಕಯ್ಯಾರು, ಸ್ಥಳೀಯ ನೇತಾರ ಝಕರಿಯಾ, ಕ್ಲಬ್ಬಿನ ಸದಸ್ಯರು ಸೇರಿದಂತೆ ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries