ಪಾಲಕ್ಕಾಡ್: ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಕೇಂದ್ರ ಸರ್ಕಾರದ ಹಲವು ಯೋಜನೆಗಳು ತಳಮಟ್ಟಕ್ಕೆ ತಲುಪುತ್ತಿಲ್ಲ ಎಂದು ಕೇಂದ್ರ ಸಚಿವ ಭಗವಂತ ಕುಬ್ಬಾ ಹೇಳಿದರು. ಯೋಜನೆಯ ಪ್ರಯೋಜನ ಅರ್ಹರಿಗೆ ತಲುಪುತ್ತಿಲ್ಲ ಎಂಬುದು ತನಗೆ ಕೇರಳ ಭೇಟಿಯಿಂದ ಅರಿವಾಯಿತು ಎಂದಿರುವರು.
ಪಾಪ್ಯುಲರ್ ಫ್ರಂಟ್ ಭಯೋತ್ಪಾದನೆ ವಿರುದ್ಧ ಕೇರಳ ಸರ್ಕಾರ ಏನನ್ನೂ ಮಾಡುತ್ತಿಲ್ಲ. ಎಸ್ ಡಿ ಪಿ ಐ ಹತ್ಯೆಯಿಂದ ಭೀತರಾಗಿರುವ ಸಾಮಾನ್ಯ ಜನÀರಿಗೆ ನ್ಯಾಯವನ್ನು ದೊರಕಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಸಂಘಪರಿವಾರದ ಕಾರ್ಯಕರ್ತರು ಹತ್ಯೆಯಾದಾಗ ಸರಕಾರ ಮೌನವಾಗಿದೆ. ಇದು ಒಳ್ಳೆಯ ಸರ್ಕಾರವಲ್ಲ ಎಂದರು.
ಕೇರಳ ಸರ್ಕಾರ ಹಲವು ಆರೋಪಗಳನ್ನು ಎದುರಿಸುತ್ತಿದೆ. ಸಾಜಿ ಚೆರಿಯನ್ ಅವರ ಸಂವಿಧಾನದ ಅವಹೇಳನ ಈ ಸರ್ಕಾರದ ಮನಸ್ಥಿತಿಯ ಭಾಗವಾಗಿದೆ. ಪ್ರಜಾಪ್ರಭುತ್ವದಲ್ಲಿ ಯಾರನ್ನು ಬೇಕಾದರೂ ಟೀಕಿಸಬಹುದು. ಆದರೆ ಪಿ.ಟಿ.ಉಷಾ ಅವರನ್ನು ಟೀಕಿಸುವುದು ಅವರ ಅಜ್ಞಾನವೇ ಕಾರಣ ಎನ್ನಬಹುದು. ಸಂವಿಧಾನಕ್ಕೆ ಅವಮಾನ ಮಾಡಿದ ಸಾಜಿ ಚೆರಿಯನ್ ಅವರಂತೆಯೇ ಈ ಸರ್ಕಾರಕ್ಕೂ ಇದೆ. ಅದು ಸಾಜಿ ಚೆರಿಯನ್ ಅವರ ವೈಯುಕ್ತಿಕ ಚಿಂತನೆ ಮಾತ್ರವಲ್ಲ. ಸಂಸದರ ಕಚೇರಿ ಮೇಲೆ ನಡೆದ ದಾಳಿಗೆ ರಾಹುಲ್ ಗಾಂಧಿ ಹಾಗೂ ಸೀತಾರಾಂ ಯೆಚೂರಿ ತರಾಟೆ ತೆಗೆದುಕೊಂಡರು. ಹಾಗಾಗಿಯೇ ಕಚೇರಿ ಮೇಲೆ ದಾಳಿ ಮಾಡಿದವರ ವಿರುದ್ಧ ರಾಹುಲ್ ಏನನ್ನೂ ಹೇಳಿಲ್ಲ ಎಂದರು.


