HEALTH TIPS

ಇಂಧನ ಕೊರತೆ ನೆಪದಲ್ಲಿ ಕೆಎಸ್ಸಾರ್ಟಿಸಿ ಸಂಚಾರ sಸ್ಥಗಿತ: ಯುವ ಕಾಂಗ್ರೆಸ್ ಪ್ರತಿಭಟನೆ

 


               ಕಾಸರಗೋಡು: ಇಂಧನ ಕೊರತೆ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಕಾಸರಗೋಡು ಜಿಲ್ಲೆಯ ಕೆಎಸ್‍ಆರ್‍ಟಿಸಿ ಡಿಪೆÇೀಗಳಲ್ಲಿ ಬಸ್‍ಗಳ ಓಡಾಟ ಆಂಶಿಕವಾಗಿ ಸ್ಥಗಿತಗೊಳಿಸಿದ ಕ್ರಮವನ್ನು ಖಂಡಿಸಿ ಯುವ ಕಾಂಗ್ರೆಸ್ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಸಾರಿಗೆ ಕಚೇರಿ ಎದುರು ಶುಕ್ರವಾರ ಪಿಕೆಟಿಂಗ್ ನಡೆಯಿತು.
            ಎಡರಂಗ ಅಧಿಕಾರಕ್ಕೆ ಬಂದ ನಂತರ ಕೆಎಸ್‍ಆರ್‍ಟಿಸಿಯನ್ನು  ಸಂಪೂರ್ಣ ಅವಗಣಿಸಲಾಗುತ್ತಿದೆ.  ಜಿಲ್ಲೆಯ ಪ್ರಮುಖ ಡಿಪೆÇೀ ಆಗಿರುವ ಕಾಞಂಗಾಡಿನಲ್ಲಿ ಕಳೆದ ವಿಷು ಹಬ್ಬದ ಸಂದರ್ಭ ಇಂಧನ ಕೊರತೆ ನೆಪವೊಡ್ಡಿ ಸಂಚಾರ ಸ್ಥಗಿತಗೊಳಿಸಲೆತ್ನಿಸದ ಕ್ರಮದ ವಿರುದ್ಧ ಅಂದು ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಇತ್ತೀಚಿನ ದಿನಗಳಲ್ಲಿ ಕಾಞಂಗಾಡು ಮತ್ತು ಕಾಸರಗೋಡು ದಿಪೋಗಳಲ್ಲಿ ಶೇ.50 ಸಂಚಾರ ಸ್ಥಗಿತಗೊಳಿಸುವ ಮೂಲಕ ಸರ್ಕಾರ ಜನರಿಗೆ ಸಂಕಷ್ಟ ತಂದೊಡ್ಡಿದೆ. ಮಲೆನಾಡು ಮತ್ತು ಜಿಲ್ಲೆಯ ಗ್ರಾಮೀಣ ಪ್ರದೇಶದ ಜನತೆಯ ಯಾತ್ರಾ ಜೀವಾಳವಾಗಿರುವ ಕೆಎಸ್ಸಾರ್ಟಿಸಿಯನ್ನು ದಮನಿಸಲು ಸರ್ಕಾರ ಪ್ರಯತ್ನಿಸುತ್ತಿದ್ದು, ಇದರ ವಿರುದ್ಧ ಯುವಕಾಂಗ್ರೆಸ್ ಪ್ರಬಲ ಹೋರಾಟ ನಡೆಸಲಿರುವುದಾಗಿ  ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ. ಪಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ. ಕೆಎಸ್ಸಾರ್ಟಿಸಿ ಬಸ್‍ಗಳು ರಾಜ್ಯಾದ್ಯಂತ ಇಂಧನ ಕೊರತೆಯಿಂದ ಸಂಚಾರ ಸ್ಥಗಿತಗೊಳಿಸುತ್ತಾ ಬರುತ್ತಿದ್ದರೆ, ಇತ್ತ ಸಾರಿಗೆ ಸಚಿವ ಆಂಟನಿ ರಾಜು ಅವರ ಬಾಲಿಶ ಹೇಳಿಕೆಗಳು ನಾಡಿನ ಜನತೆಗೆ ಎಸಗುವ ವಂಚನೆ ಹಾಗೂ ಖಂಡನೀಯವಾದುದು ಎಂದೂ ತಿಳಿಸಿದ್ದಾರೆ.
                   ಜಿಲ್ಲಾ ಉಪಾಧ್ಯಕ್ಷ ರತೀಶ್ ಕಟ್ಟುಮಡಂ, ಜಿಲ್ಲಾ ಕಾರ್ಯದರ್ಶಿಗಳಾದ ರಫಿ ಅಡೂರು, ರೋಹಿತ್ ಎರವಾಟ್, ಅಹ್ಮದ್ ಚೇರೂರು, ಮಂಡಲ ಸಮಿತಿ ಅಧ್ಯಕ್ಷರಾದ ಶಿಬಿನ್ ಉಪ್ಪಿಳಿಕಾಯಿ, ರಾಕೇಶ್ ಕರಿಚ್ಚೇರಿ,  ವಿನೀತ್ ಕಾಞಂಗಾಡ್, ಶರತ್ ಮರಕಾಪು,  ಕೃಷ್ಣಲಾಲ್ ತೋಯಮಾಲ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಂತರ ಪೊಲೀಸರು ಪ್ರತಿಭಟನಾಕಾರರನ್ನು ಬಲವಂತವಾಗಿ ತೆರವುಗೊಳಿಸಿದರು.







 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries