ಕಾಸರಗೋಡು: ಕೇರಳ ಎಸ್ಸೆಸೆಲ್ಸಿ ಪರೀಕ್ಷಾ ಪಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಶೇ. 99.70ಪಲಿತಾಂಶ ದಾಖಲಾಗಿದೆ. ಕಳೆದ ವರ್ಷ ಶೇ. 99.26 ಫಲಿತಾಂಶ ದಾಖಲಾಗಿದ್ದು, ಈ ಬಾರಿ ಶೇ.0.44ರಷ್ಟು ಹೆಚ್ಚಿನ ಫಲಿತಾಂಶ ದಾಖಲಾಗಿದೆ. ಒಟ್ಟು 419128ಮಮದಿ ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 417864ಮಂದಿ ಉನ್ನತ ವಿದ್ಯಾಬ್ಯಾಸಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. 68604ಮಂದಿ ಎಲ್ಲ ವಿಷಯದಲ್ಲಿ ಎಪ್ಲಸ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಶೇ.99.82ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ 19501ಮಂದಿ ವಿದ್ಯಾರ್ಥಿಗಳಲ್ಲಿ 19466ಮಂದಿ ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.