ಕಾಸರಗೋಡು: ಪಾವೂರು ಪೊಯ್ಯೆ ಶ್ರೀ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ಶ್ರೀ ಚಾಮುಂಡೇಶ್ವರೀ ಬಂಟ ಹಾಗೂ ಪರಿವಾರ ದೈವಗಳಿಗೆ ಪ್ರಾಚೀನ ಕಟ್ಟಕಟ್ಟಲೆಯಂತೆ ಪಾವೂರು ಪೊಯ್ಯೆ ಕಟ್ಟೆಯ ಕಾಲಾವಧಿ ನೇಮೋತ್ಸವ ಮೇ 20ರಂದು ಜರುಗಲಿರುವುದು.
ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಚಪ್ಪರ ಏರಿಸುವ ಕಾರ್ಯಕ್ರಮ ನಡೆಯಿತು. 20ರಂದು ಬೆಳಗ್ಗೆ 4ಕ್ಕೆ ಶ್ರೀ ದೈವಗಳ ಭಂಡಾರ ಏರುವಿಕೆ, 10ಕ್ಕೆ ಶ್ರೀ ಚಾಮುಂಡೇಶ್ವರೀ ದೈವಗಳ ನೇಮ, ಸಂಜೆ 6ಕ್ಕೆ ಬಂಟ ಹಾಗೂ ಪರಿವರ ದ್ಯವಗಳ ನೇಮ, ರಾತ್ರಿ 9ಕ್ಕೆ ಶ್ರೀ ದೈವಗಳ ಭಂಡಾರ ಇಳಿಯಲಿರುವುದು.