HEALTH TIPS

ನವೀನ್‌ ಜಿಂದಾಲ್‌ಗೆ ಬಿಜೆಪಿ ಟಿಕೆಟ್

             ವದೆಹಲಿ : ಉದ್ಯಮಿ, ಕಾಂಗ್ರೆಸ್‌ನ ಮಾಜಿ ಸಂಸದ ನವೀನ್ ಜಿಂದಾಲ್ ಅವರು 'ಕೈ'ಗೆ ಗುಡ್‌ಬೈ ಹೇಳಿ ಭಾನುವಾರ ಬಿಜೆಪಿ ಸೇರಿದರು. ಪ್ರಧಾನಿ ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಪರಿಕಲ್ಪನೆಗೆ ಕೊಡುಗೆ ನೀಡುವ ಉದ್ದೇಶದಿಂದ ಬಿಜೆಪಿ ಸೇರಿರುವುದಾಗಿ ಅವರು ಹೇಳಿದ್ದಾರೆ.

             ಜಿಂದಾಲ್‌ ಅವರನ್ನು ಹರಿಯಾಣದ ಕುರುಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ. ಅವರು 2004 ರಿಂದ 2014ರ ಅವಧಿಯಲ್ಲಿ ಇದೇ ಕ್ಷೇತ್ರದ ಸಂಸದರಾಗಿದ್ದರು.

                ಹರಿಯಾಣ ಸಚಿವ ಬಿಜೆಪಿಗೆ (ಚಂಡೀಗಢ ವರದಿ): ಹರಿಯಾಣದ ಪಕ್ಷೇತರ ಶಾಸಕ ಮತ್ತು ಸಚಿವರೂ ಆಗಿರುವ ರಂಜಿತ್‌ ಸಿಂಗ್‌ ಚೌಟಾಲ ಅವರು ಭಾನುವಾರ ಬಿಜೆಪಿ ಸೇರಿದರು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದರು. ಬಿಜೆಪಿಯು ಅವರನ್ನು ಹಿಸಾರ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಚಿಂತನೆ ನಡೆಸಿದೆ ಎಂದು ಮೂಲಗಳು ಹೇಳಿವೆ.

                  ಶಿವಸೇನಾ ಸೇರಿದ ಕಾಂಗ್ರೆಸ್‌ ಶಾಸಕ (ಮುಂಬೈ ವರದಿ): ನಾಗಪುರ ಜಿಲ್ಲೆಯ ಉಮ್ರೇಡ್‌ ಶಾಸಕ ರಾಜು ಪರ್ವೆ ಅವರು ಭಾನುವಾರ ಕಾಂಗ್ರೆಸ್‌ ತೊರೆದು, ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಸೇರಿದರು. ಲೋಕಸಭಾ ಚುನಾವಣೆಯಲ್ಲಿ ಅವರನ್ನು ರಾಮ್ಟೆಕ್‌ ಕ್ಷೇತ್ರದಲ್ಲಿ, ಕಾಂಗ್ರೆಸ್‌ನ ರಶ್ಮಿ ಬಾರ್ವೆ ವಿರುದ್ದ ಕಣಕ್ಕಿಳಿಸುವ ಸಾಧ್ಯತೆಯಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries