ಕಾಸರಗೋಡು: ಅಶೋಕನಗರದ ಅಶೋಕ್ ಸ್ಪೋಟ್ರ್ಸ್ ಆಂಡ್ ಆಟ್ರ್ಸ್ ಕ್ಲಬ್ ನ ಸುವರ್ಣ ಮಹೋತ್ಸವ ಆಚರಿಸಲಾಯಿತು. ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕ
ಎನ್.ಎ.ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿದರು. ನಿವೃತ್ತ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಹರಿಶ್ಚಂದ್ರ ನಾಯ್ಕ್ ಕೆ. ದೀಪಬೆಳಗಿದರು. ನಗರಸಭೆ ಅಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯರಾದ ಪವಿತ್ರಾ ಎಸ್., ವರಪ್ರಸಾದ್ ಕೋಟೆಕಣಿ, ಕ್ಲಬ್ ಗೌರವಾಧ್ಯಕ್ಷ ವರದರಾಜ್, ಅಧ್ಯಕ್ಷ ಕೆ.ವಿ.ಮೋಹನ್ ಮೊದಲಾದವರು ಉಪಸ್ಥಿತರಿದ್ದರು. ಶಿವ ಪ್ರಸಾದ್ ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಪದಾಧಿಕಾರಿಗಳಿಗೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಅಭಿನಂದನೆ ನಡೆಯಿತು. ಛದ್ಮವೇಷ ಸ್ಪರ್ಧೆ, ಮಂಗಳೂರಿನ ವಿಶ್ವಾಸ್ ಮ್ಯೂಸಿಕಲ್ಸ್ ಇವರಿಂದ ರಸಮಂಜರಿ ಸಹಿತ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದುವು.


