ಕಾಸರಗೊಡು: ಕೂಡ್ಲು ಮೀಪುಗುರಿ ಪಾರೆಕಟ್ಟೆ ಮಡಪ್ಪುರ ಶ್ರೀ ಮುತ್ತಪ್ಪನ್ ಕ್ಷೇತ್ರದ ವಾರ್ಷಿಕೋತ್ಸವ ಅಂಗವಾಗಿ ಶ್ರೀ ಮುತ್ತಪ್ಪನ್ ತಿರುವಪ್ಪಫ್ ದೈವಗಳ ವೆಳ್ಳಾಟ, ಕಲಶ ಮೆರವಣಿಗೆ, ಪಳ್ಳಿಬೇಟೆ, ತುಲಾಭಾರ ಸೇವೆ ಮಂಗಳವಾರ ಭಕ್ತಿ ಸಂಭ್ರಮದಿಂದ ನಡೆಯಿತು.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಣಪತಿ ಹೋಮ, ಸ್ಥಳಸುದ್ದಿ, ವಾಗದೇವರಿಗೆ ಪಂಚಾಮೃತ ಅಭಿಷೇಕ ನಾಗತಂಬಿಲ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಸೋಮವಾರ ತಿರುವಪ್ಪ ದೈವವನ್ನು ಮಲೆ ಇಳಿಸುವ ಕಾರ್ಯಕ್ರಮ ನಡೆಯಿತು. ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ನೃತ್ಯ ವೈವಿಧ್ಯ, ಭಜನೆ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸೇವಾ ಸಮಿತಿ ಅಧ್ಯಕ್ಷ ಗಣೇಶ್ ಪಾರೆಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಐಕ್ಯವೇದಿಕೆ ರಾಜ್ಯಾಧ್ಯಕ್ಷ ಆರ್.ವಿ.ಬಾಬು ಧಾರ್ಮಿಕ ಭಾವಣ ಮಾಡಿದರು.


