ಬದಿಯಡ್ಕ :ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಬಳಲುತ್ತಿದ್ದ ಬದಿಯಡ್ಕ ಸನಿಹದ ಚೆಡೆಕ್ಕಲ್ ನಿವಾಸಿ ದಿ. ಕುಮಾರನ್-ಚೋಯಿಚಿ ದಂಪತಿ ಪುತ್ರಿ ಅಂಬಿಕಾ ಸಿಎಚ್(44) ಮೃತಪಟ್ಟಿದ್ದಾರೆ. ಅಸೌಖ್ಯದ ಹಿನ್ನೆಲೆಯಲ್ಲಿ ಅವರನ್ನು ಚೆಂಗಳದ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೀರ್ಘ ಕಾಲದಿಂದ ಎಂಡೋಸಲ್ಫಾನ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಇವರು ಅವಿವಾಹಿತರಾಗಿದ್ದರು.

