ಕಾಸರಗೋಡು: ಜಿಲ್ಲೆಯ 983 ಬೂತ್‍ಗಳಲ್ಲಿ ಚುನಾವಣಾ ಗ್ರಾಮ ಸಭೆ ಮಾ. 2ರಂದು ಬೆಳಗ್ಗೆ 10ಕ್ಕೆ ಜಿಲ್ಲದ್ಯಂತ ನಡೆಯಲಿದೆ. ಚುನಾವಣಾ ಗ್ರಾಮ ಸಭೆಯ ಔಪಚಾರಿಕ ಉದ್ಘಾಟನೆಯನ್ನು ಮಾರ್ಚ್ 2ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ಕ್ಷೇತ್ರದ ಡಯಟ್ ಮಾಯಿಪ್ಪಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೂತ್ ಸಂಖ್ಯೆ 18 ರಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿ
ಯಾಗಿರುವ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನೆರವೇರಿಸುವರು.
2026 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಅಂತಿಮ ಪಟ್ಟಿಯನ್ನು ಬಳಸಲು ಚುನಾವಣಾ ಗ್ರಾಮ ಸಭೆ ಅನುವು ಮಾಡಿಕೊಡಲಿದೆ. ಚುನಾವಣಾ ಗ್ರಾಮ ಸಭೆ ನಡೆಸುವ ಮೂಲಕ ಈಗಾಗಲೇ ಮರಣ ಹೊಂದಿದವರು, ಮತಗಟ್ಟೆ ವ್ಯಾಪ್ತಿ ಪ್ರದೇಶದಲ್ಲಿ ವಾಸಿಸದವರು ಮತ್ತು ಸ್ಥಳಾಂತರಗೊಂಡವರ ಹೆಸರನ್ನು ತೆಗೆದುಹಾಕಲಾಗುತ್ತದೆ.
ಕಳೆದ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ನಡೆದ ವಿನೂತನ ಆಶಯವಾದ ಚುನಾವಣಾ ಗ್ರಾಮ ಸಭೆಯ ಮಾದರಿಯಲ್ಲಿ ರಾಜ್ಯಾದ್ಯಂತ ಮಾರ್ಚ್ ತಿಂಗಳಲ್ಲಿ ಚುನಾವಣಾ ಗ್ರಾಮ ಸಭೆಗಳನ್ನು ನಡೆಸಲು ಮುಖ್ಯ ಚುನಾವಣಾಧಿಕಾರಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.




.jpeg)

