HEALTH TIPS

ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣ: ಸಿಪಿಎಂನ 9 ಕಾರ್ಯಕರ್ತರು ತಪ್ಪಿತಸ್ಥರು

ತಿರುವನಂತಪುರ: 2005ರಲ್ಲಿ ಕೇರಳದ ಕಣ್ಣೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಮಾಧ್ಯಮ ಕಾರ್ಯದರ್ಶಿಯ ಸಹೋದರ ಹಾಗೂ ಸಿಪಿಎಂ ಕಾರ್ಯಕರ್ತರು ಸೇರಿದಂತೆ 9 ಮಂದಿ ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಥಲಸ್ಸೆರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕೆ.ಟಿ ನಿಸಾರ್‌ ಅಹಮ್ಮದ್‌ ಅವರು ಶುಕ್ರವಾರ ಈ ತೀರ್ಪು ನೀಡಿದ್ದು, ಮಾ.24ರಂದು ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗುವುದು.

ಎಳಂಬಿಯಾಲಿ ಸೂರಜ್‌ ಅವರು ಸಿಪಿಎಂ ತೊರೆದು ಬಿಜೆಪಿ ಸೇರಿದ ಕಾರಣ ರಾಜಕೀಯ ದ್ವೇಷದಿಂದ ಅವರನ್ನು ಆ.7 2005ರಂದು ಹತ್ಯೆ ಮಾಡಲಾಯಿತು.

9 ಮಂದಿ ತಪ್ಪಿತಸ್ಥರಲ್ಲಿ ಒಬ್ಬರಾಗಿರುವ ಟಿ.ಕೆ ರಾಜೇಶ್‌, 2012ರಲ್ಲಿ ನಡೆದ ಸಿಪಿಎಂ ನಾಯಕ ಟಿ.ಪಿ ಚಂದ್ರಶೇಖರನ್‌ ಅವರ ಹತ್ಯೆ ಪ್ರಕರಣದ ಅಪರಾಧಿಯೂ ಆಗಿದ್ದಾರೆ.

ಪ್ರಕರಣದ ವಿಚಾರಣೆ ಅವಧಿಯಲ್ಲಿ ಇಬ್ಬರು ಆರೋಪಿಗಳು ಮೃತಪಟ್ಟಿದ್ದು, ಒಬ್ಬ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries