ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್‌ನ (ಸಿಐಎಸ್‌ಸಿಇ) 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ.
ಸಿಐಎಸ್‌ಸಿಇನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೋಸೆಫ್ ಇಮಾನ್ಯುಯೆಲ್ ಅವರು ಬುಧವಾರ ಬೆಳಿಗ್ಗೆ 11 ಗಂಟೆಗೆ ಫಲಿತಾಂಶ ಪ್ರಕಟಿಸಿದರು.
ಡಿಜಿ ಲಾಕರ್, ಮಂಡಳಿಯ ವೆಬ್‌ಸೈಟ್ ಅಥವಾ 'ಕೆರಿಯರ್ಸ್' ಪೋರ್ಟಲ್‌ನಲ್ಲಿ ಫಲಿತಾಂಶ ಲಭ್ಯವಿದ ಎಂದು ಜೋಸೆಫ್ ಇಮಾನ್ಯುಯೆಲ್ ತಿಳಿಸಿದ್ದಾರೆ.
ಈ ವರ್ಷ ಕೂಡ ಬಾಲಕಿಯರೇ ಮೆಲುಗೈ ಸಾಧಿಸಿದ್ದಾರೆ.
10ನೇ ತರಗತಿಯಲ್ಲಿ ಬಾಲಕಿಯರು ಶೇ 99.45ರಷ್ಟು, ಬಾಲಕರು ಶೇ 98.64ರಷ್ಟು ಫಲಿತಾಂಶ ಪಡೆದಿದ್ದಾರೆ. ಹಾಗೇ 12ನೇ ತರಗತಿಯಲ್ಲಿ ಬಾಲಕಿಯರು ಶೇ 99.45ರಷ್ಟು, ಬಾಲಕರು ಶೇ 98.64ರಷ್ಟು ಫಲಿತಾಂಶ ಪಡೆದಿದ್ದಾರೆ.




