ವಾಷಿಂಗ್ಟನ್ : ದಶಕಗಳಿಂದ ನಿಷ್ಕ್ರಿಯವಾಗಿದ್ದ ಉಪಗ್ರಹವೊಂದು ಈಗ ನಿಗೂಢ ಸಂದೇಶಗಳನ್ನು ಕಳಿಸುತ್ತಿದೆ. 1964ರಲ್ಲಿ ಉಡಾಯಿಸಲಾದ ನಾಸಾ ಪ್ರಾಯೋಗಿಕ ಸಂವಹನ ಉಪಗ್ರಹ ಕಾಲಾ ನಂತರದಲ್ಲಿ ನಿಷ್ಕ್ರಿಯವಾಗಿತ್ತು. ಅದೇ ಉಪಗ್ರಹ ಈಗ ಸಂದೇಶ ಕಳಿಸುತ್ತಿದೆ.
1964ರಲ್ಲಿ ರಿಲೇ 1 ಮತ್ತು ರಿಲೇ 2 ಎಂಬ ಉಪಗ್ರಹ ಉಡಾವಣೆ ಮಾಡಲಾಗಿತ್ತು.
ಎರಡೂ ಉಪಗ್ರಹಗಳಿಗೆ NASA ಹಣ ಹೂಡಿತ್ತು. ಆದರೆ, ಅಮೆರಿಕದ ಬಾಹ್ಯಾಕಾಶ ಸಂಸ್ಥೆ 1965ರಲ್ಲಿ ಎರಡೂ ಉಪಗ್ರಹಗಳನ್ನು ಬಳಸುವುದನ್ನು ನಿಲ್ಲಿಸಿತು. ಎಲೆಕ್ಟ್ರಾನಿಕ್ ಉಪಕರಣಗಳು 1967ರ ಹೊತ್ತಿಗೆ ಸಂಪೂರ್ಣವಾಗಿ ಕಲಸ ಮಾಡುವುದನ್ನು ನಿಲ್ಲಿಸಿದವು.
ಕಳೆದ ವರ್ಷ ಜೂನ್ 13 ರಂದು, ಆಸ್ಟ್ರೇಲಿಯನ್ ಸ್ಕ್ವೇರ್ ಕಿಲೋಮೀಟರ್ ಅರೇ ಪಾತ್‌ಫೈಂಡರ್ ಬಳಸುವ ವಿಜ್ಞಾನಿಗಳು 30 ನ್ಯಾನೊಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯ ಸಣ್ಣ ಸಂದೇಶವೊಂದನ್ನು ಪತ್ತೆ ಹಚ್ಚಿದರು.
ಆಸ್ಟ್ರೇಲಿಯಾದ ಕರ್ಟಿನ್ ವಿಶ್ವವಿದ್ಯಾಲಯದ ಕ್ಲಾನ್ಸಿ ಜೇಮ್ಸ್ ಮತ್ತು ಅವರ ಸಹೋದ್ಯೋಗಿಗಳು ನಕ್ಷತ್ರಪುಂಜದಿಂದ ಸಿಗ್ನಲ್ ಬಂದಿದ್ದಕ್ಕೆ ದಂಗಾಗಿದ್ದರು.
'ಆದರೆ ಸಂದೇಶ ಕಳಿಸಿದ್ದ ಉಪಗ್ರಹ ಹತ್ತಿರದಲ್ಲಿದ್ದರೆ, ನಾವು ಅದನ್ನು ಆಪ್ಟಿಕಲ್ ದೂರದರ್ಶಕಗಳ ಮೂಲಕ ನೋಡಬಹುದು. ಆದ್ದರಿಂದ ನಾವೆಲ್ಲರೂ ಉತ್ಸುಕರಾಗಿದ್ದೇವೆ' ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ಉಪಗ್ರಹ ಭೂಮಿಯಿಂದ 20,000 ಕಿ.ಮೀ ದೂರದಿಂದ ಸಿಗ್ನಲ್ ಕಳಿಸಿದೆ ಎಂದು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಉಪಗ್ರಹಗಳ ಬಗ್ಗೆ ಮತ್ತಷ್ಟು ಪರಿಶೀಲನೆ ಮಾಡಿದಾಗ ಅದು ಪಲ್ಸ್ ರಿಲೇ 2 ಉಪಗ್ರಹದಿಂದ ಬಂದಿದೆ ಅನ್ನೋದು ಗೊತ್ತಾಗಿದೆ.




