HEALTH TIPS

ಚುನಾವಣಾ ಆಯೋಗದಿಂದ ಮಹತ್ವದ ಸುಧಾರಣೆ; ಮೊದಲ ಬಾರಿಗೆ ಇ-ವೋಟಿಂಗ್‌ಗೆ ಅವಕಾಶ

ನವದೆಹಲಿ: ಬಿಹಾರದಲ್ಲಿ ಮೊದಲ ಬಾರಿಗೆ ಮೊಬೈಲ್‌ ಆಪ್‌ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸುವ ಮೂಲಕ ಚುನಾವಣಾ ಆಯೋಗ ಮಹತ್ವದ ಸುಧಾರಣೆ ಜಾರಿಗೆ ತಂದಿದೆ.

ಶನಿವಾರ(ಜೂ.28) ನಡೆಯಲಿರುವ ಬಿಹಾರ ನಗರ ಪಾಲಿಕೆಗಳ ಚುನಾವಣೆಯಲ್ಲಿ ವಿಶೇಷ ಚೇತನರು, ವಲಸೆ ಕಾರ್ಮಿಕರು ಮತ್ತು ಹಿರಿಯ ನಾಗರಿಕರು ಸೇರಿದಂತೆ ಅರ್ಹ ಮತದಾರರು ಮತಗಟ್ಟೆಗೆ ತೆರಳದೆ ತಾವಿದ್ದ ಸ್ಥಳದಿಂದಲೇ ಮೊಬೈಲ್‌ ಮೂಲಕ ಮತದಾನ ಮಾಡಬಹುದು ಎಂದು ತಿಳಿಸಿದೆ.

ವಿಶೇಷ ವರ್ಗದ ಮತದಾರರಿಗೆ ಚುನಾವಣಾ ಆಯೋಗ ಮತ್ತು ʼಸಿ-ಡಾಕ್‌ʼ ಜಂಟಿಯಾಗಿ ಬ್ಲಾಕ್‌ ಚೈನ್‌ ಆಪ್‌ ಅಭಿವೃದ್ದಿಪಡಿಸಿದ್ದು, ಮತದಾನದ ಸುರಕ್ಷತೆ ಮತ್ತು ಪಾರದರ್ಶಕತೆ ಖಾತರಿಗಾಗಿ ಮುಖ ಗುರುತು ಹಾಗೂ ಸ್ಕ್ಯಾನ್‌ ಮಾಡಲಾಗುವುದು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಇತ್ತೀಚಿನ ಸುಧಾರಣೆಗಳು

ಮತದಾರರು ತಾವು ಹಾಕಿದ ಮತ ಸರಿಯಾದ ಅಭ್ಯರ್ಥಿಗೆ ದಾಖಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗ 2017 ರಲ್ಲಿ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಬಳಸಿತು. ನಂತರ 2019 ರ ಲೋಕಸಭಾ ಚುನಾವಣೆಯಲ್ಲಿ ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಬಳಸಲಾಯಿತು. ಇದರಿಂದಾಗಿ ಮತದಾನದ ಪಾರದರ್ಶಕತೆ ಮತ್ತು ನಿಖರತೆ ಹೆಚ್ಚಾಗಿದೆ.

ಮನೆಯಿಂದಲೇ ಮತದಾನದ ಸೌಲಭ್ಯ

ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ವಿಶೇಷ ಚೇತನರು ಮನೆಯಿಂದಲೇ ಮತ ಚಲಾಯಿಸುವ ಸೌಲಭ್ಯವನ್ನು ಚುನಾವಣಾ ಆಯೋಗ ಒದಗಿಸಿತ್ತು. ಇದು ಅವರಿಗೆ ಮತದಾನ ಮಾಡಲು ಅನುಕೂಲ ಮಾಡಿಕೊಡುವ ಮೂಲಕ ಮತದಾನ ಹೆಚ್ಚಳಕ್ಕೆ ಆಯೋಗ ಒತ್ತು ನೀಡಿತ್ತು.

ಮತದಾನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ

ಸರ್ಕಾರ ಹಾಗೂ ಚುನಾವಣಾ ಆಯೋಗ ಹಲವಾರು ಬಾರಿ ಜಾಗೃತಿ ಮೂಡಿಸಿದರೂ ಮತದಾನದ ಪ್ರಮಾಣ ಹೆಚ್ಚಳವಾಗುತ್ತಿರಲಿಲ್ಲ. ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರು ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇದೀಗ ಚುನಾವಣಾ ಆಯೋಗ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಮೊಬೈಲ್‌ ಆಪ್‌ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿರುವುದರಿಂದ ಮತದಾನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries