HEALTH TIPS

ಕಲ್ಲಕಟ್ಟ ಕೆ.ಜಿ.ಭಟ್ ಗ್ರಂಥಾಲಯದಲ್ಲಿ ಕಯ್ಯಾರ ಕಿಞ್ಞಣ್ಣರೈ ಸಂಸ್ಮರಣೆ- ಅಭಿನಂದನೆ

ಬದಿಯಡ್ಕ: ಗಡಿನಾಡ ಚೇತನ ಕಯ್ಯಾರ ಕಿಞ್ಞಣ್ಣ ರೈಗಳು ಬದುಕು-ಬರಹಗಳ ಮೂಲಕ ನವ ಸಮಾಜ ನಿರ್ಮಿಸಿದವರು. ನವೋದಯ ಸಾಹಿತ್ಯದ ಆರಂಭ ಕಾಲದಲ್ಲಿ ಸಾಹಿತ್ಯ ವಲಯಕ್ಕೆ ಪ್ರವೇಶಿಸಿದ ಅವರ ಕಾವ್ಯ ಪರಂಪರೆ ಬಹುಮುಖಗಳೊಡನೆ ಕನ್ನಡ ನಾಡು-ನುಡಿಗೆ ಅಮೂಲ್ಯ ಸಾಹಿತ್ಯ ತ್ನಗಳನ್ನು ನೀಡುವಲ್ಲಿ ಸಾಫಲ್ಯಗೊಂಡಿತು ಎಂದು ಹಿರಿಯ ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.

ಕಲ್ಲಕಟ್ಟದ ಕೆ.ಜಿ. ಭಟ್ ಗ್ರಂಥಾಲಯದ ವತಿಯಿಂದ ಭಾನುವಾರ ಕಲ್ಲಕಟ್ಟ ಮಜ್ದೂರರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವಾಚನಾ ಪಕ್ಷಾಚರಣೆಯ ಹಿನ್ನೆಲೆಯಲ್ಲಿ ನಡೆದ ಕಯ್ಯಾರ ಕಿಞ್ಞಣ್ಣ ರೈ ಅವರ ಸಂಸ್ಮರಣೆ ಹಾಗೂ ಕಯ್ಯಾರ ಕಿಞ್ಞಣ್ಣ ರೈ ಪ್ರಶಸ್ತಿ ಪುರಸ್ಕøತ ಪ್ರಾಧ್ಯಾಪಕ ಪ್ರೊ.ಎ. ಶ್ರೀನಾಥ್ ಅವರಿಗೆ ಸಲ್ಲಿಸಿದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆದರ್ಶ ಜೀವನ ನಡೆಸಿದ್ದ ಕಯ್ಯಾರರು ಬದುಕಿನ ಕೊನೆವರೆಗೂ ಖಾದಿ ವಸ್ತ್ರಧಾರಿಗಳಾಗಿ ಮಹಾತ್ಮನ ಹಾದಿಯಲ್ಲಿ ನಡೆದವರು. ಸಮಾಜದ ಸಕಲ ವರ್ಗಗಳೊಂದಿಗೂ ನಿರಂತರ ಸಂಪರ್ಕ, ಸಂವಹನಗಳ ಮೂಲಕ ಅವರು ಹಲವು ಜಾಗೃತಿಯ ಬೀಜಬಿತ್ತಿದವರಾಗಿದ್ದರು. ದಕ್ಷ ರಾಜಕಾರಣಿಯಾಗಿಯೂ ಅವರು ಗಮನ ಸೆಳೆದಿದ್ದರು. ಅಧ್ಯಾಪನ, ಮಾಧ್ಯಮ, ಕೃಷಿ, ಸಂಶೋಧನೆ ಸಹಿತ ವಿವಿಧ ರಂಗಗಳಲ್ಲಿ ಅವರು ಅಚ್ಚಳಿಯದ ಸಾಧನೆಗಳನ್ನು ಸಾಧಿಸಿ ಮೆರೆದವರು ಎಂದವರು ಸ್ಮರಿಸಿದರು.

ಗ್ರಂಥಾಲಯದ ಅಧ್ಯಕ್ಷ ಕೆ.ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕಯ್ಯಾರ ಪ್ರಶಸ್ತಿ ಪುರಸ್ಕøತ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಶ್ರೀನಾಥ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಶಾಲಾ ಪ್ರಬಂಧಕ ಪಿ.ವಿ. ಶಿವರಾಮ ಮಾಸ್ತರ್, ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ಟೀಚರ್, ನಿವೃತ್ತ ವಾಯು ಸೇನಾಧಿಕಾರಿ ತಿರುಮಲೇಶ್ವರ ಭಟ್ ಪಜ್ಜ, ನಿವೃತ್ತ ಜೈಲು ಮೇಲ್ವಿಚಾರಕ, ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ನಾರಾಯಣನ್ ನಾಯರ್ ಉಪಸ್ಥಿತರಿದ್ದು ಶುಭಹಾರೈಸಿದರು. ಕೆ.ಕೆ.ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗ್ರಂಥಪಾಲಕಿ ಮಂಜು ವಿಜಯ್ ವಂದಿಸಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries