ಈ ಸಂಬಂಧ ಕೇಂದ್ರ ಬಹುಕೋಟಿ ನಿಧಿಗೆ ಅನುಮೋದನೆ ನೀಡಿದೆ.
ಹೌದು, ಈ ಬಗ್ಗೆ ಖುದ್ದು ಟೆಲಿಕಾಂ ಖಾತೆ ರಾಜ್ಯ ಸಚಿವ ಪೆಮ್ಮಸಾನಿ ಚಂದ್ರಶೇಖರ್ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಈ ವರ್ಷ BSNLಗಾಗಿ ಕೇಂದ್ರ ಸರ್ಕಾರದಿಂದ 6,982 ಕೋಟಿ ರೂ.ಗಳ ಹೆಚ್ಚುವರಿ ನಿಧಿಗೆ ಅನುಮೋದನೆ ನೀಡಿದೆ. ಇದಕ್ಕಿಂತ ಮೊದಲು ಕೇಂದ್ರು ಟೆಲಿಕಾಂ ಕಂಪನಿಗೆ ಸುಮಾರು 3.22 ಲಕ್ಷ ಕೋಟಿ ರೂ.ಗಳ ನಿಧಿ ಹಂಚಿತ್ತು. ಆ ಪೈಕಿ ಎರಡು ವರ್ಷದ ಹಿಂದೆ 89,000 ಕೋಟಿ ರೂಪಾಯಿ ಹಂಚಿಕೆ ಆಗಿತ್ತು. ಅದರಲ್ಲಿ 4ಜಿ ಸೇವೆ ಹಾಗೂ 5ಜಿ ಸ್ಪೆಕ್ಟ್ರಮ್ ಸೇವಾ ಯೋಜನೆಗಳು ಸೇರಿವೆ ಎಂದು ಸಚಿವರು ವಿವರಿಸಿದ್ದಾರೆ.
ಭಾರತಾದ್ಯಂತ ಬಿಎಸ್‌ಎನ್‌ಎಲ್ 4ಜಿ ನೆಟ್‌ವರ್ಕ್ ಸೇವೆ ಶುರು ಮಾಡಲು 6.982 ಕೋಟಿ ರೂ.ಗಳ ಹೆಚ್ಚುವರಿ ಬಂಡವಾಳ ವೆಚ್ಚಕ್ಕೆ ಕೇಂದ್ರ ಒಪ್ಪಿಗೆ ನೀಡಿದೆ. ಈ ತಿಂಗಳ ತಿಂಗಳ ಅಂತ್ಯದ ವೇಳೆಗೆ, BSNL 4ಜಿ ನೆಟ್‌ವರ್ಕ್ ಒದಗಿಸಲು 96,300 ಟವರ್‌ಗಳನ್ನು ನಿರ್ಮಿಸಿದೆ. ಟವರ್ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಸದ್ಯ ಹಾಲಿ ಸೈಟ್‌ಗಳಲ್ಲಿ 91,281 ಟವರ್‌ಗಳಲ್ಲಿ 4ಜಿ ಆರಂಭಿಸಲಾಗಿದೆ.
2024-25ರ ಕಳೆದ ಹಣಕಾಸು ಸಾಲಿನ ಮೂರು ಮತ್ತು ನಾಲ್ಕನೇ ತ್ರೈಮಾಸಿಕಗಳಲ್ಲಿ ಬಿಎಸ್‌ಎನ್‌ಎಲ್ ಕಂಪನಿ ಕ್ರಮವಾಗಿ 262 ಕೋಟಿ ಮತ್ತು 280 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬಿಎಸ್‌ಎನ್‌ಎಲ್ ನಷ್ಟ ಎದುರಿಸಿದೆ ಎಂದು ಅವರು ತಿಳಿಸಿದರು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ BSNL 4ಜಿ ಸೇವೆ ಆರಂಭವಾಗಿದೆ.ಇದರಿಂದ ದೆಹಲಿ ಬಳಕೆದಾರರಿಗೆ ವೇಗ ಇಂಟರ್‌ನೆಟ್ ಸೇವೆ, ಸುಸ್ಥಿರ ಕರೆಗಳ ಸೇವೆ ಸಿಕ್ಕಿದೆ. ಸರ್ಕಾರಿ ಟೆಲಿಕಾಂ ಕಂಪನಿಯು ಪಾಲುದಾರ ಜತೆ ಕೈ ಜೋಡಿಸಿ ನೆಟ್‌ವರ್ಕ್ ಹಂಚಿಕೆ ಮಾಡಸಲಾಗಿದೆ. ಈ ಸಂಬಂದ ಒಪ್ಪಂದ ನಡೆದಿದೆ. ಇನ್ನು ಈ ವೇಳೆ ನಕಲಿ ಎಸ್‌ಎಂಎಸ್ ಸಂದೇಶಗಳಿಂದ ಬಳಕೆದಾರರ ರಕ್ಷಣೆಗಾಗಿ, ಆಂಟಿ-ಸ್ಮಿಶಿಂಗ್ ಮತ್ತು ಆಂಟಿ-ಸ್ಪ್ಯಾಮ್ ರಕ್ಷಣೆ ಆರಂಭಿಸಲಾಗಿದೆ ಎಂದರು.
ಕೇಂದ್ರ ಟೆಲಿಕಾಂ ಇಲಾಖೆ ಈ ಹಿಂದೆ ಸುಮಾರು 47,000 ಕೋಟಿ ರೂ. ವೆಚ್ಚ ಬಳಸಿ, ನೆಟ್‌ವರ್ಕ್ ಸುಧಾರಣೆಗೆ ಮುಂದಾಗಿತ್ತು. ಟೆಲಿಕಾಂ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಸೇವೆ ವಿಸ್ತರಣೆ, ಬಳಕೆದಾರರ ಹೆಚ್ಚಿಸುವ ಮೊತೆಗೆ ಮೊಬೈಲ್ ಸೇವೆಗೆ ಸಂಬಂದಿಸಿದ ವ್ಯವಹಾರದ ಬೆಳವಣಿಗೆ ಮಾಡುವಂತೆ ಕಂಪನಿಗೆ ಕೋರಿದ್ದಾರೆ.
BSNL 4ಜಿ ಸೇವೆ ಎಲ್ಲೆಡೆ ಲಭ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ 5ಜಿ ಸೇವೆ ಸಹ ಬಳಕೆಗೆ ಲಭ್ಯವಾಗಲಿದೆ. ಈಗಾಗಲೇ ಅದರ ಪ್ರಾಯೋಗಿಕ ಪರೀಕ್ಷೆ ಕಾರ್ಯ ಯಶಸ್ವಿಯಾಗಿದೆ. ಹೈದರಾಬಾದ್, ದೆಹಲಿ ಸೇರಿದಂತೆ ಮೊದಲಾದ ಕಡೆಗಳಲ್ಲಿ ಪರೀಕ್ಷೆ ಮಾಡಲಾಗಿದೆ. ಇದನ್ನು 'ಕ್ವಾಂಟಮ್ 5ಜಿ (Q-5G)' ಎಂದು ಕರೆಯಲಾಗುತ್ತದೆ. ಬಳಕೆದಾರರನ್ನು ಹೆಚ್ಚಿಸುವ ಉದ್ದೇಶದಿಂದ BSNL ಸಿಮ್ ಕಾರ್ಡ್‌ಗಳ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಆರಂಭವಾಗಲಿದೆ.
ಅದಕ್ಕಾಗಿ ಆನ್‌ಲೈನ್ ಪೋರ್ಟಲ್ ಶುರು ಮಾಡಲಾಗಿದೆ. ಬಳಕೆದಾರರು ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಸಿಮ್ ಪಡೆಯಬಹುದು.ಇದೆಲ್ಲರ ಜೊತೆಗೆ ಗ್ರಾಹಕಸ್ನೇಹಿ ಮೊಬೈಲ್ ರೀಚಾರ್ಜ್‌ಗಳನ್ನು ಬಿಎಸ್‌ಎನ್‌ಎಲ್ ಘೋಷಿಸುತ್ತಿದೆ. ಇದೆಲ್ಲವುಗಳ ಮೂಲಕ ಟೆಲಿಕಾಂ ವಲಯದಲ್ಲಿ ಬಿಎಸ್‌ಎನ್‌ಎಲ್ ಕ್ರಾಂತಿ ಮಾಡಲು ಮುಂದಾಗಿದೆ.




