ಬದಿಯಡ್ಕ: ಡಾ. ಮಾಲಿನಿ ಸರಳಾಯ ಸಂಸ್ಮರಣೆ ಹಾಗೂ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಬದಿಯಡ್ಕ ಸೀತಾರಾಮ ಕಾಂಪ್ಲೆಕ್ಸ್, ಶಾಸ್ತ್ರೀಸ್ ಕಂಪೌಂಡ್‍ನಲ್ಲಿ bಚಿನುವಾರ ಜರಗಿತು.
ಯಕ್ಷಾಂತರಂಗ ಪೆರ್ಲ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದ ಡಾ.ಸತೀಶ ಪುಣಿಂಚತ್ತಾಯ ಪೆರ್ಲ ಅವರು ಸಂಸ್ಮರಣಾ bಚಿಷಣದಲ್ಲಿ ಗಿಈಥಿದ್ಯಕೀಯ ರಂಗದಲ್ಲಿ ಅಪಾರ ಜನಮನ್ನಣೆಯನ್ನು ಗಳಿಸಿ ಜನಮಾನಸದಲ್ಲಿ ಸ್ಥಿರವಾಗಿ ನೆಲೆಯೂರಿದ್ದಾರೆ. ಅವರ ನೆನಪು ಸದಾ ಹಸಿರಾಗಿರಬೇಕು, ಅದರೊಂದಿಗೆ ಯಕ್ಷಗಾನ ಕಲೆಗೆ ಪ್ರೋತ್ಸಾಹ ನಿರಂತರ ಲಭಿಸಬೇಕು ಎಂದರು.
ಕವಿ ಉದನೇಶ್ವರ ಮೂಲಡ್ಕ, ಉಪ್ಲೇರಿ ವಾಂತಿಚ್ಚಾಲು ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ವಾಂತಿಚ್ಚಾಲು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಶೇಣಿ ವೇಣುಗೋಪಾಲ ಭಟ್ ನಿರೂಪಿಸಿದರು. ಮೂಲಡ್ಕ ನಾರಾಯಣ ಸ್ವಾಗತಿಸಿದರು. ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಶಿವಭಕ್ತ ವೀರಮಣಿ ಯಕ್ಷಗಾನ ತಾಳಮದ್ದಳೆ ನಡೆಯಿತು.




.jpg)
