ಕಾಸರಗೋಡು: 19 ವರ್ಷದ ಬಾಲಕಿಯನ್ನು ಅಪಹರಿಸಿದ ಪ್ರಕರಣದಲ್ಲಿ ಮಾಂತ್ರಿಕ ಉಸ್ತಾದ್ ನನ್ನು ಬಂಧಿಸಲಾಗಿದೆ. ವಿವರವಾದ ಹೇಳಿಕೆ ದಾಖಲಿಸಿಕೊಂಡ ಬಾಲಕಿಯನ್ನು ಪೆÇಲೀಸರು ಮಹಿಳಾ ಮಂದಿರಕ್ಕೆ ಸ್ಥಳಾಂತರಿಸಿದ್ದಾರೆ.
ಕೊಲ್ಲಂ ಕಾನಾದ ವಿದ್ಯಾನಗರದ ಅಬ್ದುಲ್ ರಶೀದ್ ಮತ್ತು ಬಾಲಕಿಯನ್ನು ಕರ್ನಾಟಕದ ವಿರಾಜಪೇಟೆಯಲ್ಲಿ ಹೊಸದುರ್ಗ ಪೋಲೀಸರು ಪತ್ತೆ ಮಾಡಿದ್ದಾರೆ.
ಘಟನೆಯಲ್ಲಿ ತನ್ನ ಮಗಳು ಕಾಣೆಯಾಗಿದ್ದಾಳೆ ಎಂಬ ತಾಯಿಯ ದೂರಿನ ಮೇರೆಗೆ ಹೊಸದುರ್ಗ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಉಸ್ತಾದ್ ಕಾಣೆಯಾಗಿದ್ದಾಳೆ ಎಂಬ ಪತ್ನಿಯ ದೂರಿನ ಮೇರೆಗೆ ವಿದ್ಯಾನಗರ ಪೋಲೀಸರೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹುಡುಗಿಯ ತಾಯಿಯ ಅನಾರೋಗ್ಯವನ್ನು ಗುಣಪಡಿಸುವ ನೆಪದಲ್ಲಿ ವಾಮಾಚಾರ ಚಿಕಿತ್ಸೆಗೆ ಬಂದಿದ್ದ ವ್ಯಕ್ತಿ ಕಳೆದ ತಿಂಗಳು 22 ರಂದು ಬಾಲಕಿಯೊಂದಿಗೆ ತೆರಳಿದ್ದ.
ಕಾಲೇಜಿಗೆ ಹೋಗಿದ್ದ ಬಾಲಕಿ ಸಂಜೆಯಾದರೂ ಕಾಣದ ಕಾರಣ ತಾಯಿ ಹೊಸದುರ್ಗ ಪೋಲೀಸರಿಗೆ ದೂರು ನೀಡಿದ್ದರು. ಪೆÇಲೀಸರು ನಡೆಸಿದ ತನಿಖೆಯಲ್ಲಿ, ಬಾಲಕಿ ಅಬ್ದುಲ್ ರಶೀದ್ ಜೊತೆ ಹೋಗಿರುವುದು ಕಂಡುಬಂದಿದೆ. ಮೊದಲು ಅವರು ಕರ್ನಾಟಕದ ಚಿಂತಾಮಣಿಗೆ ತೆರಳಿದ್ದರು. ನಂತರ, ಅವರು ಇರಿಟ್ಟಿಗೆ ತಲುಪುವ ಮೊದಲು ಎರ್ವಾಡಿ, ಪಾಲಕ್ಕಾಡ್, ಕೊಯಮತ್ತೂರು ಮತ್ತು ಊಟಿಗೆ ಪ್ರಯಾಣಿಸಿದರು.




