ಕಠ್ಮಂಡು: 2 ವರ್ಷ ಎಂಟು ತಿಂಗಳ ಬಾಲಕಿ ಆರ್ಯತಾರಾ ಶಕ್ಯಾ ಅವರನ್ನು ನೇಪಾಳದ ನೂತನ 'ದೇವಿ'ಯಾಗಿ ಆಯ್ಕೆ ಮಾಡಲಾಗಿದೆ. ಈಗಿರುವ ದೇವಿಯು ಪ್ರೌಢಾವಸ್ಥೆಗೆ ಬರುತ್ತಿರುವುದರಿಂದ ನೂತನ ದೇವಿಯನ್ನು ಆಯ್ಕೆ ಮಾಡಲಾಗಿದೆ. ಈ ದೇವಿಯನ್ನು ಹಿಂದೂಗಳು ಮತ್ತು ಬೌದ್ಧರು ಆರಾಧಿಸುತ್ತಾರೆ.
2ರಿಂದ 4 ವರ್ಷದೊಳಗಿನ ಹೆಣ್ಣುಮಕ್ಕಳನ್ನು ದೇವಿಯಾಗಿ ಆಯ್ಕೆ ಮಾಡಲಾಗುತ್ತದೆ. ಈ ಮೊದಲು ಆಯ್ಕೆಯಾಗಿರುವ ಹೆಣ್ಣುಮಗು ಪ್ರೌಢಾವಸ್ಥೆ ತಲುಪಿದಾಗ, ಆಕೆಯ ಬದಲು ನೂತನವಾಗಿ ಆಯ್ಕೆ ಮಾಡಲಾದ 'ಕನ್ಯೆ'ಯನ್ನು ಆರಾಧಿಸಲಾಗುತ್ತದೆ.
ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ದೇವಿಯನ್ನು ರಥದಲ್ಲಿ ಕೂರಿಸಿ, ಭಕ್ತರು ತೇರು ಎಳೆಯುತ್ತಾರೆ. ಆಕೆಯ ಹಣೆ ಮೇಲೆ ಮೂರನೇ ಕಣ್ಣನ್ನು ಬರೆಯಲಾಗುತ್ತದೆ.




