HEALTH TIPS

ಕೋಟಿಕುಳಂನ ಮನೆಯೊಂದರಿಂದ ಪತ್ತೆಹಚ್ಚಲಾದ ಅಪೂರ್ವ ಸಾಮಗ್ರಿ ಬಗ್ಗೆ ಜಿಲ್ಲಾಧಿಕಾರಿಗೆ ವರದಿ

ಕಾಸರಗೋಡು: ಕೋಟಿಕುಳಂನ ವ್ಯಕ್ತಿಯೊಬ್ಬರ ಮಾಲಿಕತ್ವದ ಕಟ್ಟಡದಲ್ಲಿ ಪತ್ತೆಹಚ್ಚಲಾದ ಅಮೂಲ್ಯ ವಸ್ತುಗಳಲ್ಲಿ ವಿದೇಶಿ ಸಾಮಗ್ರಿಗಳೂ ಪತ್ತೆಯಾಗಿದ್ದು, ಆರ್ಕಿಯೋಲಾಜಿಕಲ್ ಸರ್ವೇ ಆಫ್ ಇಂಡಿಯ(ಎಎಸ್‍ಐ)ತ್ರಿಶ್ಯೂರ್ ವಲಯದ ಅಧಿಕಾರಿಗಳು ನಡೆಸಿದ ತಪಾಸಣೆಯಿಂದ ಮಾಹಿತಿ ಬಹಿರಂಗಗೊಂಡಿದೆ. ದಿ. ಮಹಮ್ಮದ್ ಕುಞÂ ಎಂಬವರ ಮನೆಯ ಕೊಠಡಿಯಲ್ಲಿ ಪ್ರಾಚ್ಯವಸ್ತು ಸಂಗ್ರಹಾಗಾರದಲ್ಲಿ ಈ ವಿಶೇಷ ಸಾಮಗ್ರಿ ಪತ್ತೆಹಚ್ಚಲಾಗಿದೆ. ಕೊಲ್ಲಿ ರಾಷ್ಟ್ರಗಳಿಂದ ಈ ಅಮೂಲ್ಯ ವಸ್ತುಗಳನ್ನು ತರಿಸಿಕೊಳ್ಳಲಾಗಿದ್ದು, ಈ ಬಗ್ಗೆ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗೆ ಸಮರ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೇಕಲ ಪೊಲೀಸ್ ಠಾಣೆಯ ಅನತಿ ದೂರದಲ್ಲಿರುವ ಮನೆಯೊಂದರಿಂದ ಆ. 18ರಂದು ಪೊಲೀಸರು ಈ ಅಮೂಲ್ಯ ಸಾಮಗ್ರಿ ಪತ್ತೆಹಚ್ಚಿದ್ದು, ನಂತರ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries