ಕಾಸರಗೋಡು: ಕಕ್ಕಾಟ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರಂಭಗೊಂಡಿರುವ ಕಾಸರಗೋಡು ಜಿಲ್ಲಾ ಶಾಲಾ ಮಟ್ಟದ ವಿಜ್ಞಾನ ಮೇಳದಲ್ಲಿ 662ಅಂಕಗಳೊಂದಿಗೆ ಕಾಸರಗೋಡು ಉಪಜಿಲ್ಲೆ
ಮುಂಚೂಣಿಯಲ್ಲಿದೆ. ಬೇಕಲ ಉಪಜಿಲ್ಲೆ 579ಅಂಕಗಳೊಂದಿಗೆ ದ್ವಿತೀಯ ಹಾಗೂ ಹೊಸದುರ್ಗ ಉಪಜಿಲ್ಲೆ 543 ಅಂಕಗಳೊಂದಿಗೆ ತೃತೀಯ ಸ್ಥಾನದಲ್ಲಿ ಮುಂದುವರಿಯುತ್ತಿದೆ.
ಶಾಲಾಮಟ್ಟದಲ್ಲಿ ಪಾಕಂ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಪ್ರಥಮ, ಎಡನೀರು ಸ್ವಾಮೀಜೀಸ್ ಹೈರ್ ಸಎಕೆಂಡರಿ ಶಾಲೆ 150ಅಂಕಗಳೊಂದಿಗೆ ದ್ವಿತೀಯ, ಚೆಮ್ನಾಡ್ ಜಮಾಅತ್ ಹೈಯರ್ ಸೆಕೆಂಡರಿ ಶಾಲೆ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ.
ಸಾಮಾಜಿಕ ವಿಜ್ಞನ ಮೇಳದಲ್ಲಿ 185 ಅಂಕದೊಂದಿಗೆ ಕಾಸರಗೋಡು ಉಪಜಿಲ್ಲೆ ಚಾಂಪ್ಯನ್‍ಶಿಪ್ ಅಲಂಕರಿಸಿದೆ. 149ಅಂಕಗಳೊಂದಿಗೆ ಚೆರ್ವತ್ತೂರು ಉಪಜಿಲ್ಲೆ ದ್ವಿತೀಯ, 143ಅಂಕಗಳೊಂದಿಗೆ ಹೊಸದುರ್ಗ ಉಪಜಿಲ್ಲೆಗೆ ತೃತೀಯ ಸ್ಥಾನ ಲಭಿಸಿದೆ. ಶುಕ್ರವಾರ ಆರಂಭಗೊಮಡ ವಿಜ್ಞಾನ ಮೇಳವನ್ನು ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸಿದರು. ವಿಜ್ಞಾನಮೇಳ, ಸಾಮಾಜಿಕ ವಿಜ್ಞಾನ ಮೇಳ, ಗಣಿತ ಮೇಳದಲ್ಲಿ 52 ಸ್ಪರ್ಧೆಗಳಲ್ಲಿ ಉಪಜಿಲ್ಲೆಯ 856ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ.

