ದಂತೇವಾಡ : ₹65 ಲಕ್ಷ ಇನಾಮು ಘೋಷಣೆಯಾಗಿದ್ದ 27 ಮಂದಿ ಸೇರಿ 37 ನಕ್ಸಲರು ಛತ್ತೀಸಗಢದ ದಂತೇವಾಡ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.
37 ನಕ್ಸಲರ ಪೈಕಿ 27 ಮಂದಿಗೆ ₹65 ಲಕ್ಷ ಇನಾಮು ಘೋಷಣೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ನಕ್ಸಲರ ಶರಣಾಗತಿ, ಪುನರ್ವಸತಿಯ 'ಪೂನಾ ಮಾರ್ಗೆಮ್' ಉಪಕ್ರಮದ ಭಾಗವಾಗಿ 12 ಮಹಿಳೆಯರು ಸೇರಿದಂತೆ 37 ನಕ್ಸಲರು ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾದರು ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರಾಯ್ ಹೇಳಿದ್ದಾರೆ.
ಶರಣಾದವರಲ್ಲಿ ಕುಮಲಿ ಅಲಿಯಾಸ್ ಅನಿತಾ ಮಾಂಡವಿ, ಗೀತಾ ಅಲಿಯಾಸ್ ಲಕ್ಷ್ಮಿ ಮಡ್ಕಮ್, ರಂಜನ್ ಅಲಿಯಾಸ್ ಸೋಮಾ ಮಾಂಡವಿ ಮತ್ತು ಭೀಮಾ ಅಲಿಯಾಸ್ ಜಹಾಜ್ ಕಲ್ಮು ಪ್ರಮುಖ ಕೇಡರ್‌ಗಳಾಗಿದ್ದಾರೆ. ಅವರೆಲ್ಲರ ತಲೆಗೆ ತಲಾ ₹8 ಲಕ್ಷ ಇನಾಮು ಘೋಷಣೆಯಾಗಿತ್ತು.




