HEALTH TIPS

ಯುವಕರ ಸಮರ್ಪಣಾ ಭಾವವೇ 'ವಿಕಸಿತ ಭಾರತ'ದ ದೊಡ್ಡ ಶಕ್ತಿ: 'ಮನದ ಮಾತು' ಹೇಳಿದ ಮೋದಿ

 ನವದೆಹಲಿ: ದೇಶದ ಯುವಜನರ ಸಮರ್ಪಣಾ ಭಾವವೇ 'ವಿಕಸಿತ ಭಾರತ'ದ ಅತಿದೊಡ್ಡ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

'ಮನದ ಮಾತು' (ಮನ್‌ ಕಿ ಬಾತ್‌) ಮಾಸಿಕ ರೆಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಬಾಹ್ಯಾಕಾಶದಿಂದ ಕೃಷಿ ಕ್ಷೇತ್ರದವರೆಗೆ ನವೆಂಬರ್‌ ತಿಂಗಳಲ್ಲಿ ನಡೆದ ಮಹತ್ವದ ಬೆಳವಣಿಗೆಗಳನ್ನು ಉಲ್ಲೇಖಿಸಿದ್ದಾರೆ. 


'ಕಳೆದವಾರವಷ್ಟೇ ಉದ್ಘಾಟನೆಯಾಗಿರುವ 'ಸ್ಕೈರೂಟ್‌' ಸ್ಟಾರ್ಟ್‌ಅಪ್‌ ಸಂಸ್ಥೆಯ ಇನ್ಫಿನಿಟಿ ಕ್ಯಾಂಪಸ್‌ ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಉತ್ತೇಜನ ನೀಡಿದೆ. ಇದು ಭಾರತದ ಹೊಸ ಮಾದರಿಯ ಆಲೋಚನೆ, ಅನ್ವೇಷಣೆ ಮತ್ತು ಯುವ ಶಕ್ತಿಯ ಪ್ರತಿರೂಪವಾಗಿದೆ' ಎಂದು ಹೇಳಿದ್ದಾರೆ.

ಇದು ಮೋದಿ ಅವರು ನಡೆಸಿಕೊಟ್ಟ 128ನೇ 'ಮನದ ಮಾತು' ಕಾರ್ಯಕ್ರಮವಾಗಿದ್ದು, ಇಸ್ರೋ ಇತ್ತೀಚೆಗೆ ಆಯೋಜಿಸಿದ್ದ ವಿಶೇಷ ಡ್ರೋನ್‌ ಸ್ಪರ್ಧೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ವಿಡಿಯೊ ಕುರಿತಾಗಿಯೂ ಪ್ರಸ್ತಾಪಿಸಿದ್ದಾರೆ.

'ದೇಶದ ಯುವಕರು, ಅದರಲ್ಲೂ ಜೆನ್‌-ಝಿ ಸಮುದಾಯ ಮಂಗಳ ಗ್ರಹವನ್ನು ಹೋಲುವ ಸನ್ನಿವೇಶದಲ್ಲಿ ಡ್ರೋನ್‌ಗಳನ್ನು ಹಾರಿಸಲು ಪ್ರಯತ್ನಿಸಿರುವುದು ಆ ವಿಡಿಯೊದಲ್ಲಿದೆ' ಎಂದಿರುವ ಮೋದಿ, ಆರಂಭದಲ್ಲಿ ವೈಫಲ್ಯ ಅನುಭವಿಸಿದರೂ ಯುವಕರು ಪ್ರಯತ್ನ ಮುಂದುವರಿಸಿ, ಯಶಸ್ಸು ಸಾಧಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.








ಚಂದ್ರಯಾನ-2 ಯೋಜನೆ ವಿಫಲವಾದಾಗ ಇಸ್ರೊ ವಿಜ್ಞಾನಿಗಳೂ ಬೇಸರಗೊಂಡಿದ್ದರು. ಆದಾದ ನಂತರ ಚಂದ್ರಯಾನ-3ರಲ್ಲಿ ಯಶಸ್ಸು ಸಾಧಿಸಿದ್ದರು. ಆಗ ವಿಜ್ಞಾನಿಗಳ ಕಣ್ಣಲ್ಲಿ ಕಂಡಂತಹ ಹೊಳಪನ್ನು, ಡ್ರೋನ್‌ ಹಾರಿಸುವಲ್ಲಿ ಯಶಸ್ವಿಯಾದ ಯುವಕರ ಕಣ್ಣಲ್ಲಿಯೂ ಕಾಣಬಹುದಾಗಿದೆ ಎಂದಿದ್ದಾರೆ.


'ಯುವಜನರ ಸಮರ್ಪಣಾ ಭಾವ, ವಿಜ್ಞಾನಿಗಳ ಬದ್ಧತೆಯನ್ನು ಕಂಡಾಗಲೆಲ್ಲ ನನ್ನ ಹೃದಯ ತುಂಬಿ ಬರುತ್ತದೆ. ಯುವಕರ ಈ ಸಮರ್ಪಣಾ ಭಾವವೇ ವಿಕಸಿತ ಭಾರತದ ಬಹುದೊಡ್ಡ ಶಕ್ತಿಗಳಲ್ಲಿ ಒಂದಾಗಿದೆ' ಎಂದು ಪ್ರತಿಪಾದಿಸಿದ್ದಾರೆ.‌


'ವಂದೇ ಮಾತರಂ' ಗೀತೆಯ 150ನೇ ವರ್ಷಾಚರಣೆ, ಸಂವಿಧಾನ ದಿನಾಚರಣೆ, ಅಯೋಧ್ಯೆಯ ರಾಮ ಮಂದಿರದ ಮೇಲೆ ಹಾರಿಸಿದ ಧರ್ಮಧ್ವಜದ ಕುರಿತಾಗಿ ಸ್ಫೂರ್ತಿದಾಯಕ ಮಾತುಗಳನ್ನಾಡಿರುವ ಮೋದಿ, ಜೇನು ಕೃಷಿಗೆ ಸಂಬಂಧಿಸಿದಂತೆ ದೇಶದಾದ್ಯಂತ ಕೈಗೊಂಡಿರುವ ಉಪಕ್ರಮಗಳು, ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಳು, 2030ರಕ್ಕೆ ಕಾಮನ್‌ವೆಲ್ತ್‌ ಗೇಮ್ಸ್‌ ಆತಿಥ್ಯ ವಹಿಸಲು ಬಿಡ್‌ನಲ್ಲಿ ಯಶಸ್ವಿಯಾಗಿರುವುದೂ ಸೇರಿದಂತೆ ಹಲವು ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries