ದೇಸಿ ಮಾರುಕಟ್ಟೆಯಲ್ಲಿ ಆಮದುದಾರರಿಂದ ಕಂಡುಬಂದ ನಿರಂತರ ಬೇಡಿಕೆಯಿಂದಾಗಿ ಬಾರತೀಯ ರೂಪಾಯಿ ಮೌಲ್ಯ ತನ್ನ ಕುಸಿತದ ಸರಣಿ ಮುಂದುವರಿಸಿದೆ ಎಂಬ ವಿವರ ನೀಡಲಾಗುತ್ತಿದೆ. ಆದರೆ ಈ ಬಾರಿ ನಿಜಕ್ಕೂ ರೂಪಾಯಿ ಮೌಲ್ಯ ಪಾತಾಳಕ್ಕಿಳಿದಿದೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ.
ಭಾರತದ ರೂಪಾಯಿ ಮೌಲ್ಯವು ಸೋಮವಾರ ಅಮೆರಿಕದ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 89.7ಕ್ಕೆ ಕುಸಿದಿದೆ. ನವೆಂಬರ್ 26ರಂದು ನಡೆದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 3 ಪೈಸೆ ಕುಸಿತ ಕಂಡು 89ರ ಗಡಿ ದಾಟಿ ರೂ 89.25ಕ್ಕೆ ತಲುಪಿತ್ತು. ಕಳೆದ ವಾರದ ಮುಕ್ತಾಯದ ಸಮಯದಲ್ಲಿ 89.46ಕ್ಕೆ ಮುಕ್ತಾಯವಾಯಿತು. ತಜ್ಞರ ಪ್ರಕಾರ ಇದು ಕಳವಳಕಾರಿ ಸೂಚನೆ.
ಏಕೆಂದರೆ, ಕಳೆದ ಕೆಲವು ವರ್ಷಗಳಿಂದ ರೂಪಾಯಿ ಮೌಲ್ಯ ಕುಸಿಯುತ್ತಲೇ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಮೌಲ್ಯ ದುರ್ಬಲವಾಗಿದ್ದರೂ, ದೇಸಿ ಮಾರುಕಟ್ಟೆಯಲ್ಲಿ ಆಮದುದಾರರಿಂದ ಕಂಡುಬಂದ ನಿರಂತರ ಬೇಡಿಕೆಯಿಂದಾಗಿ ಬಾರತೀಯ ರೂಪಾಯಿ ಮೌಲ್ಯ ತನ್ನ ಕುಸಿತದ ಸರಣಿ ಮುಂದುವರಿಸಿದೆ ಎಂಬ ವಿವರ ನೀಡಲಾಗುತ್ತಿದೆ. ಆದರೆ ಈ ಬಾರಿ ನಿಜಕ್ಕೂ ರೂಪಾಯಿ ಮೌಲ್ಯ ಪಾತಾಳಕ್ಕಿಳಿದಿದೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ.
ರೂಪಾಯಿ ಕುಸಿತದ ಒಂದು ನೋಟ
ಈ ಬಾರಿ ರೂಪಾಯಿ ಮೌಲ್ಯ ಕೇವಲ ಅಮೆರಿಕದ ಡಾಲರ್ ಮುಂದೆ ಕುಸಿದಿಲ್ಲ. ನವೆಂಬರ್ 21ರಿಂದ ನವೆಂಬರ್ 28ರ ನಡುವೆ ಡಾಲರ್ ವಿರುದ್ಧ ರೂಪಾಯಿ ವಿನಿಮಯ ರೂ 88.64ರಿಂದ ರೂ 89.46ರವರೆಗೆ ಕುಸಿದಿದೆ. ಯೂರೋ ಮುಂದೆ ರೂ. 102.32ರಿಂದ ರೂ. 103.63ರವರೆಗೆ, ಮತ್ತು ಜಪಾನಿನ ಯೆನ್ ವಿರುದ್ಧ 0.5642ರಿಂದ 0.5720ಕ್ಕೆ ಕುಸಿದಿದೆ.
ಕಳೆದ ಒಂದು ವರ್ಷದ ಅವಧಿಯತ್ತ ಗಮನಹರಿಸಿದಲ್ಲಿ ತೀವ್ರ ಕುಸಿತ ಕಾಣಿಸುತ್ತದೆ. 2024 ನವೆಂಬರ್ 28ರಿಂದ ಒಂದು ವರ್ಷದಲ್ಲಿ ಡಾಲರ್ ವಿರುದ್ಧ ರೂಪಾಯಿ 84.49ರಿಂದ 89.46, ಯೂರೋ ವಿರುದ್ಧ 89.12ರಿಂದ 103.63, ಪೌಂಡ್ ವಿರುದ್ಧ 106.97ರಿಂದ 118.27 ಮತ್ತು ಯೆನ್ ವಿರುದ್ಧ 0.5574ರಿಂದ 0.5720ಗೆ ಕುಸಿದಿದೆ.
ಈ ವಿವರಗಳನ್ನು ಗಮನಿಸಿದರೆ ರೂಪಾಯಿ ಎಲ್ಲಾ ಪ್ರಮುಖ ಕರೆನ್ಸಿಗಳ ವಿರುದ್ಧ ಕುಸಿತದ ಹಾದಿಯಲ್ಲಿದೆ. ಯೂರೋ ಮತ್ತು ಪೌಂಡ್ ವಿರುದ್ಧ ಹೆಚ್ಚು ಕುಸಿದಿದೆ.
ಕುಸಿತ ಕಳವಳಕಾರಿ ಏಕೆ?
ರೂಪಾಯಿ ಕುಸಿತವನ್ನು ಅದರ ನಾಮಿನಲ್ ಎಫೆಕ್ಟಿವ್ ವಿನಿಮಯ ದರ (NEER) ಮತ್ತು ರಿಯಲ್ ಎಫೆಕ್ಟಿವ್ ವಿನಿಯಮ ದರದ (REER) ಚಲನೆಗಳಿಂದ ತಿಳಿದುಕೊಳ್ಳಬಹುದು. ನಾಮಿನಲ್ ಎಫೆಕ್ಟಿವ್ ವಿನಿಮಯ ದರ ಮತ್ತು ರಿಯಲ್ ಎಫೆಕ್ಟಿವ್ ವಿನಿಮಯ ದರಗಳು ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಗೆ ಹೋಲುವಂತಹ ಸೂಚ್ಯಂಕಗಳು. ಸಿಪಿಐ ಎಂಬದು ನಗರ ಪ್ರದೇಶದ ಗ್ರಾಹಕರು, ಗ್ರಾಹಕ ಸರಕು ಮತ್ತು ಸೇವೆಗಳ ಮಾರುಕಟ್ಟೆ ಸಂಗ್ರಹಕ್ಕೆ ಪಾವತಿಸಿದ ಬೆಲೆಗೆ ಕಾಲಾನುಕ್ರಮದಲ್ಲಿ ಕಂಡುಬರುವ ಸರಾಸರಿ ಬದಲಾವಣೆಯ ಸಂಖ್ಯಾಶಾಸ್ತ್ರೀಯ ಅಳತೆ.
ನಾಮಿನಲ್ ಎಫೆಕ್ಟಿವ್ ವಿನಿಮಯ ದರ ಮತ್ತು ರಿಯಲ್ ಎಫೆಕ್ಟಿವ್ ವಿನಿಮಯ ದರಗಳು ಭಾರತದ ಪ್ರಮುಖ ಪಾಲುದಾರ ದೇಶಗಳ ಕರೆನ್ಸಿಗಳಿಗೆ ಹೋಲಿಸಿದರೆ ರೂಪಾಯಿ ವಿನಿಮಯದ ದರದ ಸರಾಸರಿ ಸೂಚ್ಯಂಕ. ಈ ವಿಶ್ಲೇಷಣೆಗೆ 40 ಕರೆನ್ಸಿಗಳು ಬುಟ್ಟಿಯಲ್ಲಿವೆ. ಮತ್ತು ಮೂಲ ವರ್ಷವಾಗಿ 2015-16ಅನ್ನು ತೆಗೆದುಕೊಳ್ಳಲಾಗಿದೆ.
2025ರಿಂದ ಕುಸಿತದ ಟ್ರೆಂಡ್
2018-19ರಿಂದ ನೀರ್ ಸೂಚ್ಯಂಕವು 100ಕ್ಕಿಂತ ಕೆಳಗೆ ಇದೆ. ಮೌಲ್ಯ 90 ಎಂದರೆ ರೂಪಾಯಿ ತನ್ನ ಮುಖ್ಯ ವಹಿವಾಟು ಪಾಲುದಾರರ ಜೊತೆಗೆ 2015-16ರಿಂದೀಚೆಗೆ ಶೇ 10ರಷ್ಟು ಮೌಲ್ಯ ಕುಸಿದಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಆದರೆ, ಈ ವರ್ಷದ ಆರಂಭದವರೆಗೂ ನೀರ್ 90ರ ಆಸುಪಾಸಿನಲ್ಲಿಯೇ ಇತ್ತು. ಆದರೆ ಜನವರಿ 2022 ಮತ್ತು ಜನವರಿ 2025 ನಡುವೆ 93.94ರಿಂದ 90.75ಗೆ ಕುಸಿದಿತ್ತು. ಅಂದರೆ ಶೇ 3.4% ಕುಸಿತ. ಆದರೆ ಮುಂದುವರಿದು 2025 ಅಕ್ಟೋಬರ್ ಗೆ ಇದು 84.58ಗೆ ಬಂದು ನಿಂತಿದೆ. ಅಂದರೆ 9 ತಿಂಗಳಲ್ಲಿ ಶೇ 6.8ರಷ್ಟು ಕುಸಿತ ಕಂಡಿದೆ.
ರೀರ್ ಕಡೆಗೆ ನೋಡಿದರೆ ರೂಪಾಯಿ ಕುಸಿತ ಇನ್ನಷ್ಟು ಸ್ಪಷ್ಟವಾಗಿ ಕಾಣಿಸುತ್ತದೆ. ನೀರ್ ಕುಸಿತವೆಂದರೆ ಜಾಗತಿಕ ಪಾಲುದಾರರ ಬುಟ್ಟಿಯ ವಿರುದ್ಧ ಬಾಹ್ಯ ಮೌಲ್ಯದ ಚಲನೆಯ ಸಾರಾಂಶದ ಸೂಚ್ಯಂಕವನ್ನು ಸೆರೆಹಿಡಿದಿರುವುದು ಎನ್ನಬಹುದು. ಆದರೆ ಅದು ಹಣದುಬ್ಬರವನ್ನು ಪರಿಗಣಿಸುವುದಿಲ್ಲ. ಕರೆನ್ಸಿಯ ನಾಮಿನಲ್ ವಿನಿಮಯ ದರವು ದೇಸಿ ಹಣದುಬ್ಬರ ದರಕ್ಕಿಂತ ಕಡಿಮೆಯಾದರೆ, ಅದು ನೈಜ ರೀತಿಯಲ್ಲಿ ಮೌಲ್ಯವರ್ಧನೆಗೊಂಡಿದೆ.
ರೀರ್ ಮೂಲತಃ ತವರು ದೇಶ ಮತ್ತು ಅದರ ವ್ಯಾಪಾರ ಪಾಲುದಾರರ ನಡುವಿನ ಹಣದುಬ್ಬರ ವ್ಯತ್ಯಾಸಗಳಿಗೆ ಸರಿಹೊಂದಿಸಲಾದ ನೀರ್ ಸೂಚ್ಯಂಕವಾಗಿದೆ. ಹೀಗಾಗಿ ಹೋಲಿಕೆಯ ಬೆಲೆಯ ಚಲನೆಗಳು ಮತ್ತು ವಿನಿಮಯ ದರವನ್ನು ಎರಡೂ ಪರಿಗಣಿಸಿಕೊಂಡು, ಇತರ ದೇಶಗಳಿಗೆ ಹೋಲಿಸಿದರೆ ಕರೆನ್ಸಿಯನ್ನು ಕಡಿಮೆ ಮೌಲ್ಯೀಕರಿಸಿದೆ, ಅತಿಯಾಗಿ ಮೌಲ್ಯೀಕರಿಸಿದೆ ಅಥವಾ ಸಾಕಷ್ಟು ಮೌಲ್ಯಯುತವಾಗಿದೆಯೇ ಎಂಬುದರ ನಿಜವಾದ ಮಾಪಕ ರೀರ್. ರೂಪಾಯಿಯ ನಾಮಿನಲ್ ವಿನಿಮಯ ದರ ಹಾಗೆ ಉಳಿದು, ಭಾರತದಲ್ಲಿ ಬೆಲೆಗಳು ಇತರ ದೇಶಗಳಿಗಿಂತ ಹೆಚ್ಚು ವೇಗವಾಗಿ ಏರಿಕೆಯಾದಲ್ಲಿ ರೀರ್ ಏರುತ್ತದೆ. ಹಾಗೆ ಭಾರತದ ಉತ್ಪನ್ನಗಳು ಹೋಲಿಸಿದರೆ ಹೆಚ್ಚು ದುಬಾರಿಯಾಗುತ್ತವೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಕಡಿಮೆ ಸ್ಪರ್ಧಾತ್ಮಕವಾಗುತ್ತವೆ.

ಚಾರ್ಟ್ (ಚಿತ್ರ) ಅನ್ನು ಗಮನಿಸಿದಲ್ಲಿ 2024 ನವೆಂಬರ್ ನಲ್ಲಿ ರೀರ್ ಸೂಚ್ಯಂಕ ಸಾರ್ವಕಾಲಿಕ ಅಧಿಕ 108.06ಕ್ಕೆ ಏರಿದೆ. ನಂತರ 2025 ಅಕ್ಟೋಬರ್ ನಲ್ಲಿ ಇದು ಶೇ 9.8ರಷ್ಟು ಕುಸಿದು 97.47ಗೆ ಇಳಿದಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಆಗಿನ ಅತ್ಯಧಿಕವಾಗಿ ಮೌಲ್ಯದಿಂದ (overvalued), ಇಂದು ರೂಪಾಯಿ ಮೌಲ್ಯ ಕಡಿಮೆಯಾಗಿದೆ (undervalued). ಹೀಗೆ ಆಗಲು ಎರಡು ಕಾರಣಗಳಿವೆ.
ಮೊದಲನೆಯದು ಚೈನೀಸ್ ಯುವಾನ್ (11.66ರಿಂದ 12.63) ಸೇರಿದಂತೆ ಬಹುತೇಕ ಅಂತಾರಾಷ್ಟ್ರೀಯ ಕರೆನ್ಸಿಗಳ ವಿರುದ್ಧ ರೂಪಾಯಿಯ ಬೆಲೆ ಸಹಜವಾಗಿ ಕುಸಿಯುತ್ತಿರುವುದು. ನೀರ್ 85ಕ್ಕಿಂತ ಕೆಳಗೆ ಕುಸಿದಿರುವುದು ಒಟ್ಟಾರೆ ನಾಮಿನಲ್ ಅಪಮೌಲ್ಯಕ್ಕೆ ಉದಾಹರಣೆಯಾಗಿದೆ.
ಎರಡನೆಯದು ಹಣದುಬ್ಬರಕ್ಕೆ ಸಂಬಂಧಿಸಿದೆ. ವರ್ಷಾನುವರ್ಷ ಸಿಪಿಐ ಹಣದುಬ್ಬರ 2025 ಅಕ್ಟೋಬರ್ನಲ್ಲಿ ಭಾರತಕ್ಕೆ 0.25% ಆಗಿನ ಅಮೆರಿಕ ಮತ್ತು ಜಪಾನ್ ದರಕ್ಕಿಂತ (ತಲಾ 3%), ಯುನೈಟೆಡ್ ಕಿಂಗ್ಡಂ (3.6%), ಯೂರೋ ಏರಿಯಾ (2.1%), ಇಂಡೋನೇಷ್ಯಾ (2.9%) ಮತ್ತು ಬ್ರೆಝಿಲ್ ಗಿಂತ (4.7%) ಕಡಿಮೆ ಇತ್ತು. ಅಸಾಮಾನ್ಯವಾಗಿ ಕಡಿಮೆ ಸಿಪಿಐ ಹಣದುಬ್ಬರದೊಂದಿಗೆ (2025 ಮೇಯಿಂದ sub-3%) ನಾಮಿನಲ್ ಅಪಮೌಲ್ಯವು ರೀರ್ ಸೂಚ್ಯಂಕವನ್ನು 100ಕ್ಕಿಂತ ಕಡಿಮೆಗೆ ದೂಡಿತ್ತು. ಹೀಗೆ ರೂಪಾಯಿ ಮೌಲ್ಯ ಕಡಿಮೆಯಾಗಿದೆ (undervalued).
ಕೃಪೆ: indianexpress.com




