ಕುಂಬಳೆ: ಅರಿಕ್ಕಾಡಿ ಟೋಲ್ ಪ್ಲಾಜಾ ಕುರಿತು ಪೋಲೀಸರ ನಿಲುವನ್ನು ವಿರೋಧಿಸಿ ಯುಡಿಎಫ್ ಮಂಜೇಶ್ವರ ಮಂಡಲ ಸಮಿತಿಯು ಕುಂಬಳೆ ಪೋಲೀಸ್ ಠಾಣೆ ಮುಂದೆ ಗುರುವಾರ ಸಂಜೆ ಪ್ರತಿಭಟನಾ ಸಭೆ ನಡೆಸಿತು. ಕೆಪಿಸಿಸಿ ಕಾರ್ಯದರ್ಶಿ ವಕೀಲ ಬಿ. ಸುಬ್ಬಯ್ಯ ರೈ ಸಭೆಯನ್ನು ಉದ್ಘಾಟಿಸಿದರು. ಅಜೀಜ್ ಮರಿಕೆ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಕಾರ್ಯದರ್ಶಿ ಜೆ.ಎಸ್. ಸೋಮಶೇಖರ, ವಿ.ಪಿ. ಅಬ್ದುಲ್ ಖಾದರ್, ಮಂಜುನಾಥ ಆಳ್ವ ಮಡ್ವ, ಅಶ್ರಫ್ ಕಾರ್ಲೆ, ಎ.ಕೆ. ಆರಿಫ್, ಲಕ್ಷ್ಮಣ ಪ್ರಭು ಕುಂಬಳೆ ಮತ್ತು ಸೈಫುಲ್ಲಾ ತಂಙಳ್ ಮಾತನಾಡಿದರು.
ತುರ್ತು ಕ್ರಮ ಅಗತ್ಯ-ಲೀಗ್:
ಅರಿಕ್ಕಾಡಿ ಟೋಲ್ ಪ್ಲಾಜಾದಲ್ಲಿ ಯುವಕ ಮತ್ತು ಅವರ ಕುಟುಂಬದ ವಿರುದ್ಧ ಪೋಲೀಸರು ತೆಗೆದುಕೊಂಡ ಕ್ರಮ ಆಘಾತಕಾರಿ ಎಂದು ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ. ತಪ್ಪಿತಸ್ಥ ಕುಂಬಳೆ ಸಿಐ ಮತ್ತು ಇತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷ ಅಜೀಜ್ ಮರಿಕೆ ಮತ್ತು ಪ್ರಧಾನ ಕಾರ್ಯದರ್ಶಿ ಎ.ಕೆ. ಆರಿಫ್ ಒತ್ತಾಯಿಸಿದ್ದಾರೆ.

.jpg)
.jpg)
