HEALTH TIPS

"AI ಗೆ ದಿಲ್ಲಿಯ ಟ್ರಾಫಿಕ್ ಜಾಮ್‌ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ": AI ಇಂಪ್ಯಾಕ್ಟ್ ಶೃಂಗಸಭೆಗೆ ತಡವಾಗಿ ಆಗಮಿಸಿದ ರಿಷಿ ಸುನಕ್ ರಿಂದ ಹಾಸ್ಯಚಟಾಕಿ

ನವದೆಹಲಿ: ದೆಹಲಿಯಲ್ಲಿ ಆಯೋಜನೆಗೊಂಡಿರುವ AI ಇಂಪ್ಯಾಕ್ಟ್ ಶೃಂಗಸಭೆಗೆ ಬ್ರಿಟನ್‌ ನ ಉಪ ಪ್ರಧಾನಮಂತ್ರಿ ಡೇವಿಡ್ ಲ್ಯಾಮಿ ಅವರೊಂದಿಗೆ ತಡವಾಗಿ ಆಗಮಿಸಿದ ಬ್ರಿಟನ್‌ ನ ಮಾಜಿ ಪ್ರಧಾನಿ ರಿಷಿ ಸುನಕ್, "ಕೃತಕ ಬುದ್ಧಿಮತ್ತೆ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿದ್ದರೂ, ಭಾರತದ ರಾಷ್ಟ್ರ ರಾಜಧಾನಿ ದಿಲ್ಲಿಯ ಸಂಚಾರ ದಟ್ಟಣೆ ಸಮಸ್ಯೆಯನ್ನು ಈಗಲೂ ಪರಿಹರಿಸಲು ಸಾಧ್ಯವಾಗಿಲ್ಲ" ಎಂದು ತಮಾಷೆ ಮಾಡಿದ ಘಟನೆ ನಡೆದಿದೆ.

ಅವರು ಹೀಗೆ ಹೇಳುತ್ತಿದ್ದಂತೆಯೇ ಸಭಿಕರು ನಗೆಗಡಲಲ್ಲಿ ತೇಲಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ರಿಷಿ ಸುನಕ್, "ನಾವು ಕೆಲ ನಿಮಿಷ ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ. ಅದು ಸಂಪೂರ್ಣವಾಗಿ ನನ್ನ ತಪ್ಪು. ನಾವು ಈ ವಾರ ಕೇಳಿದಂತೆ ಕೃತಕ ಬುದ್ಧಿಮತ್ತೆ ಹಲವಾರು ಕೆಲಸಗಳನ್ನು ಮಾಡಬಲ್ಲದು. ಆದರೆ, ಅದಕ್ಕಿನ್ನೂ ದಿಲ್ಲಿಯ ಸಂಚಾರ ದಟ್ಟಣೆ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅದನ್ನು ಮಾಡಲು ಮುಂದಾಗಿ," ಎಂದು ಹಾಸ್ಯಮಯವಾಗಿ ಹೇಳಿದರು.

ಆದರೆ, ರಿಷಿ ಸುನಕ್ ಅವರ ಲಘು ಧಾಟಿಯ ಮಾತುಗಳು ಅಲ್ಲಿಗೇ ನಿಲ್ಲಲಿಲ್ಲ. ನರೇಂದ್ರ ಮೋದಿಯವರ ಕೃತಕ ಬುದ್ಧಿಮತ್ತೆ ಕುರಿತ ದೂರದೃಷ್ಟಿಯನ್ನು ಶ್ಲಾಘಿಸಿದ ಅವರು, ಭಾರತ ಕೃತಕ ಬುದ್ಧಿಮತ್ತೆಯಲ್ಲಿ ಬ್ರಿಟನ್ ಅನ್ನು ಹಿಂದಿಕ್ಕಿದ್ದರೂ, ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಬ್ರಿಟನ್ ಈಗಲೂ ಭಾರತಕ್ಕಿಂತ ಮೇಲಿದೆ ಎಂದು ಮತ್ತೊಮ್ಮೆ ಹಾಸ್ಯ ಚಟಾಕಿ ಹಾರಿಸಿದರು.

"ಕೊಂಚ ಬೇಸರವಾದರೂ, ಭಾರತ ಆ ಸ್ಥಾನವನ್ನು ಪಡೆಯಲು ಬ್ರಿಟನ್ ಅನ್ನು ಹಿಂದಿಕ್ಕಿದೆ. ನಾನು ಕೆಲ ಕ್ಷಣಗಳ ಹಿಂದಷ್ಟೇ ಭಾರತದ ಪ್ರಧಾನಿಯನ್ನುದ್ದೇಶಿಸಿ ಹೇಳಿದಂತೆ, ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಇಂಗ್ಲೆಂಡ್ ಈಗಲೂ ಮುಂದಿದೆ; ಇದು ಬಹಳ ಮುಖ್ಯ," ಎಂದು ವಿನೋದಮಯವಾಗಿ ಹೇಳಿದರು.

ಭಾರತ್ ಮಂಟಪಂನಲ್ಲಿ ಆಯೋಜನೆಗೊಂಡಿರುವ AI ಇಂಪ್ಯಾಕ್ಟ್ ಶೃಂಗಸಭೆಯ ಪ್ರಯುಕ್ತ ವಿಐಪಿಗಳ ಸಂಚಾರಕ್ಕಾಗಿ ಹಲವು ಮಾರ್ಗಗಳನ್ನು ಬದಲಿಸಲಾಗಿದ್ದು, ಇದರಿಂದ ದಿಲ್ಲಿಯಾದ್ಯಂತ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ಗಮನಾರ್ಹ ಪ್ರಮಾಣದ ವಿಳಂಬವಾಗುತ್ತಿದೆ ಎಂದು ಸವಾರರು ತಿಳಿಸಿದ್ದು, ದಿಲ್ಲಿಯ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರವು ತೆವಳುತ್ತಿದೆ ಅಥವಾ ಸಂಪೂರ್ಣವಾಗಿ ನಿಲುಗಡೆಯ ಹಂತಕ್ಕೆ ತಲುಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಿಷಿ ಸುನಕ್ ಮೇಲಿನಂತೆ ತಮಾಷೆ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries