ಪೆರ್ಲ: ಆಧ್ಯಾತ್ಮಿಕತೆಯೊಂದಿಗೆ ಭೌತಿಕ ಶಕ್ತಿ ಸೇರಿಕೊಂಡಾಗ ಶ್ರೇಯಸ್ಸು ಕಾಣಲು ಸಾಧ್ಯ ಎಂಬುದಾಗಿ ಶ್ರೀ ಕ್ಷೇತ್ರ ಒಡಿಯೂರಿನ ಸಾಧ್ವಿ ಶ್ರೀ ಮಾತಾನಂದಮಯಿ ತಿಳಿಸಿದ್ದಾರೆ. ಅವರು ಹಿಂದೂ ಸಂಗಮ ಆಯೋಜನಾ ಸಮಿತಿ ಎಣ್ಮಕಜೆ ಪಂಚಾಯಿತಿ ಸಮಿತಿ ಆಶ್ರಯದಲ್ಲಿ ಭಾನುವಾರ ಪೆರ್ಲ ಪೇಟೆ ವಠಾರದಲ್ಲಿ ನಡೆದ ಬೃಹತ್ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶ್ರೇಷ್ಠ ದಾರ್ಶನಿಕರನ್ನು ವಿಶ್ವಕ್ಕೆ ನಿಡಿರುವ ಹೆಗ್ಗಳಿಗೆ ಭಾರತಕ್ಕಿದೆ. ಧರ್ಮ ಹಾಗೂ ದೇಶದ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಸಮಸ್ತ ಹಿಂದೂ ಸಮಾಜಕ್ಕೆ ಮಹತ್ವದ ಜವಾಬ್ದಾರಿಯಿದೆ. ಆರೆಸ್ಸೆಸ್‍ನ ನೂರನೇ ವರ್ಷಾಚರಣೆಯ ಮಹತ್ವದ ಕಾಲಘಟ್ಟದಲ್ಲಿ ಧರ್ಮ, ಸಂಸ್ಕøತಿ, ಪರಂಪರೆ ಸಂರಕ್ಷಣೆಯ ಜವಾಬ್ದಾರಿಯುತ ಚಟುವಟಿಕೆಗಳಲ್ಲಿ ಹಿಂದೂಸಮಾಜ ಕೈಜೋಡಿಸಬೇಕಾದ ಅನಿವಾರ್ಯತೆಯಿರುವುದಾಗಿ ತಿಳಿಸಿದರು.
ಡಾ. ಸತ್ಯನಾರಾಯಣ ಪುಣಿಂಚಿತ್ತಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೇರಳ ಹಿಂದು ಐಕ್ಯವೇದಿಯ ಕಾರ್ಯಾಧ್ಯಕ್ಷ ವಲ್ಸನ್ ತಿಲ್ಲಂಗೇರಿ ದಿಕ್ಸೂಚಿ ಭಾಷಣ ಮಾಡಿದರು. ಹಿಂದು ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷ ಸುಬ್ಬಪಾಟಾಳಿ ಕುತ್ತಾಜೆ ಅಧ್ಯಕ್ಷತೆ ವಹಿಸಿದ್ದರು. ಕವಯಿತ್ರಿ ಕುಮಾರಿ ಸುಜಯ ಸಜಂಗದ್ದೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿವಿಧ ಧಾರ್ಮಿಕ ಕೇಂದ್ರಗಳ ಮೊಕ್ತೇಸರರಾದ ಕೃಷ್ಣ ಶ್ಯಾನುಭಾಗ್ ಬಜಕೂಡ್ಲು, ಕೃಷ್ಣ ಭಟ್ ರೆಂಜೆತಮೂಲೆ, ಐತ್ತು ನಯ್ಕ್ ಬಜಕೂಡ್ಲು ಉಪಸ್ಥಿತರಿದ್ದರು. ಡಾ. ಸತೀಶ್ ಪುಣಿಂಚಿತ್ತಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹರೀಶ್ ಕುಲಾಲ್ ಸ್ವಾಗತಿಸಿದರು. ಸ್ವರ್ಣಲತಾ ಜಿ.ಶೆಟ್ಟಿ ಪ್ರಾರ್ಥನೆ ಹಾಡಿದರು. ಪುಟ್ಟಪ್ಪ ಖಂಡಿಗೆ ವಂದಿಸಿದರು.
ಕಾರ್ಯಕ್ರಮಕ್ಕೂ ಮೊದಲು ಪೆರ್ಲ ಸನಿಹದ ಇಡಿಯಡ್ಕ ಹರೀಶ್ ಕುಲಾಲ್ ಸ್ವಾಗತಿಸಿದರು. ಸ್ವರ್ಣಲತಾ ಜಿ.ಶೆಟ್ಟಿ ಪ್ರಾರ್ಥನೆ ಹಾಡಿದರು. ಪುಟ್ಟಪ್ಪ ಖಂಡಿಗೆ ವಂದಿಸಿದರು.
ಕಾರ್ಯಕ್ರಮಕ್ಕೂ ಮೊದಲು ಪೆರ್ಲ ಸನಿಹದ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ವಠಾರದಿಂದ ಪೆರ್ಲ ಪೇಟೆ ವರೆಗೆ ಬೃಹತ್ ಸಾಂಸ್ಕøತಿಕ ಶೋಭಾಯಾತ್ರೆ ನಡೆಯಿತು. ಕುಣಿತ ಭಜನೆ, ಪುಟ್ಟ ಮಕ್ಕಳಿಂದ ವಿವಿಧ ವೇಷಗಳು, ಚೆಂಡೆಮೇಳ, ಮುತ್ತುಕೊಡೆ, ಗೊಂಬೆಕುಣಿತದೊಂದಿಗೆ ಮೆರವಣಿಗೆ ಸಂಪನ್ನಗೊಂಡಿತು.
ಸಭಾ ಕಾರ್ಯಕ್ರಮದ ನಂತರ ಕಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ, ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಭಕ್ತಿಗೀತೆ, ಜಾನಪದ ಗೀತೆ ಹಾಗೂ ರಾಷ್ಟ್ರ ಭಕ್ತಿಗೀತೆಗಳನ್ನೊಳಗೊಂಡ ಗಾನ ಸಂಭ್ರಮ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಿತು.



