HEALTH TIPS

ಬಿಹಾರದಲ್ಲಿ ನಕಲಿ ಔಷಧ ಕಾರ್ಖಾನೆ ಮೇಲೆ ದಾಳಿ: ಭಾರಿ ಪ್ರಮಾಣದ ಔಷಧ ಜಪ್ತಿ

 ನವದೆಹಲಿ: ಪಟ್ನಾದ ಬಳಿಯಿದ್ದ ನಕಲಿ ಔಷಧ ಕಾರ್ಖಾನೆ ಮೇಲೆ ದಾಳಿ ನಡೆಸಿರುವ ದೆಹಲಿ ಪೊಲೀಸರು, ಭಾರಿ ಪ್ರಮಾಣದ ಔಷಧವನ್ನು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.ಯಾವುದೇ ಅಧಿಕೃತ ಉತ್ಪಾದನಾ ಪರವಾನಗಿ ಇಲ್ಲದೇ ಕಾರ್ಖಾನೆಯಲ್ಲಿ ನಕಲಿ ಔಷಧಗಳನ್ನು ತಯಾರಿಸಲಾಗುತಿತ್ತು.


ರಸಾಯನಶಾಸ್ತ್ರಜ್ಞರು ಸೇರಿದಂತೆ ಕಡ್ಡಾಯ ತಾಂತ್ರಿಕ ಸಿಬ್ಬಂದಿಯ ಅನುಪಸ್ಥಿತಿಯಲ್ಲಿ ಔಷಧಗಳನ್ನು ತಯಾರು ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಘಟನಾ ಸ್ಥಳದಲ್ಲಿ ನಕಲಿ ಔಷಧಗಳು, ಸಿರಪ್ ಹಾಗೂ ಸೈಕೋಟ್ರೋಪಿಕ್ ವಸ್ತುಗಳು ಪತ್ತೆಯಾಗಿವೆ. ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಕಾರ್ಖಾನೆಯೊಳಗೆ ಅವಧಿ ಮೀರಿದ ಔಷಧಗಳನ್ನು ಮತ್ತೆ ಪ್ಯಾಕ್ ಮಾಡಿ, ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು. ಇದು ಸಾರ್ವಜನಿಕರ ಆರೋಗ್ಯಕ್ಕೆ ದೊಡ್ಡ ಅಪಾಯ ತರುತ್ತಿತ್ತು ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಬಿಹಾರದಲ್ಲಿ ಎರಡು ಅಕ್ರಮ ಔಷಧ ಘಟಕಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಆ ಪ್ರಕರಣದ ವಿಚಾರಣೆ ನಡೆಸುವಾಗ, ಮತ್ತಷ್ಟು ಮಾಹಿತಿಗಳು ಬಹಿರಂಗವಾಗಿದೆ. ಅದರ ಆಧಾರದ ಮೇಲೆ ದಾಳಿ ಮಾಡಲಾಗಿದೆ. ಇದುವರೆಗೂ 9 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries