HEALTH TIPS

ಶಶಿಕಲಾ ಹೊಸ ಪಕ್ಷ ಸ್ಥಾಪನೆ ಘೋಷಣೆ: ಇನ್‌ಸ್ಟಂಟ್ ಇಡ್ಲಿ-ಸಾಂಬಾರ್‌ಗೆ ಹೋಲಿಕೆ

ತಿರುನೆಲ್ವೇಲಿ: ಎಐಎಡಿಎಂಕೆ ಉಚ್ಛಾಟಿತ ನಾಯಕಿ, ಚಿಕ್ಕಮ್ಮ ವಿ.ಕೆ.ಶಶಿಕಲಾ ಸ್ಥಾಪಿಸುತ್ತಿರುವ ಹೊಸ ರಾಜಕೀಯ ಪಕ್ಷವನ್ನು 'ಇನ್‌ಸ್ಟಂಟ್ ಇಡ್ಲಿ-ಸಾಂಬಾರ್‌' ಎಂದು ಎಎಂಎಂಕೆ ಪಕ್ಷದ ನಾಯಕ ಟಿ.ಟಿ.ವಿ. ದಿನಕರನ್‌ ಅಣಕಿಸಿದ್ದಾರೆ.

'ಚುನಾವಣೆ ಸಮೀಪಿಸುತ್ತಿದ್ದಂತೆ ಇನ್‌ಸ್ಟಂಟ್ ಇಡ್ಲಿ, ಇನ್‌ಸ್ಟಂಟ್ ಸಾಂಬಾರ್‌ನಂತೆ ಅನೇಕ ಹೊಸ ಪಕ್ಷಗಳು ಸ್ಥಾಪನೆಯಾಗುತ್ತಿವೆ.

ಯಾರು ಬೇಕಾದರೂ ಪಕ್ಷ ಕಟ್ಟುವ ಅವಕಾಶ ಪ್ರಜಾಪ್ರಭುತ್ವದಲ್ಲಿ ಇದೆ' ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

'ರಾಜ್ಯದಲ್ಲಿ ಅಮ್ಮನ(ಜಯಲಲಿತಾ) ಆಡಳಿತವನ್ನು ಸ್ಥಾಪಿಸುತ್ತೇವೆ ಎಂದು ಹೇಳಿಕೊಳ್ಳುತ್ತಿರುವವರ ನಿಜವಾದ ಬಣ್ಣ ಈಗ ಬಯಲಾಗಿದೆ' ಎಂದು ಶಶಿಕಲಾ ಅವರ ಹೆಸರು ಉಲ್ಲೇಖಿಸದೇ ಕಿಡಿಕಾರಿದ್ದಾರೆ.

'ಅಮ್ಮನ ನೈಜ ಬೆಂಬಲಿಗರು ಎನ್‌ಡಿಎ ಮೈತ್ರಿಕೂಟದಡಿಯಲ್ಲಿ ಒಂದಾಗಿದ್ದಾರೆ. ಡಿಎಂಕೆಯ ಜನವಿರೋಧಿ ಆಡಳಿತವನ್ನು ಸೋಲಿಸಲು ನಾವು ಒಗ್ಗಟ್ಟಾಗಿದ್ದೇವೆ' ಎಂದು ಅವರು ಹೇಳಿದ್ದಾರೆ.

ದಿನಕರನ್ ಅವರು ಶಶಿಕಲಾ ಅವರ ಸಹೋದರಿ ವನಿತಾಮಣಿ ಅವರ ಪುತ್ರ. 2017ರ ಆಗಸ್ಟ್‌ನಲ್ಲಿ ಪನ್ನೀರ್‌ಸೆಲ್ವಂ ಮತ್ತು ಪಳನಿಸ್ವಾಮಿ ಸೇರಿ ಶಶಿಕಲಾ ಮತ್ತು ದಿನಕರನ್ ಇಬ್ಬರನ್ನೂ ಎಐಎಡಿಎಂಕೆಯಿಂದ ಹೊರಹಾಕಿದ್ದರು. ನಂತರದ ದಿನಗಳಲ್ಲಿ ಎಐಎಡಿಎಂಕೆ ಸಂಪೂರ್ಣ ನಿಯಂತ್ರಣ ಪಡೆದ ಪಳನಿಸ್ವಾಮಿ, 2022ರಲ್ಲಿ ಪನ್ನೀರ್‌ಸೆಲ್ವಂ ಅವರನ್ನು ಪಕ್ಷದಿಂದ ಹೊರದಬ್ಬಿದ್ದರು.

ಮಂಗಳವಾರ(ಫೆ.24) ರಾಮನಾಥಪುರದಲ್ಲಿ ಜಯಲಲಿತಾ ಅವರ ಹುಟ್ಟುಹಬ್ಬವನ್ನು ಆಚರಿಸಿದ ಶಶಿಕಲಾ, ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ 2026ರ ಮೊದಲಾರ್ಧದಲ್ಲಿ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಡಿಎಂಕೆ, ವಿಜಯ್‌ ನೇತೃತ್ವದ ಟಿವಿಕೆ ಮತ್ತು ಎನ್‌ಡಿಎ ಮೈತ್ರಿಕೂಟದ ನಡುವೆ ನೇರ ಪೈಪೋಟಿ ಇರಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries