ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ದೇವಸ್ಥಾನ ಹಾಗೂ ಭಕ್ತರನ್ನು ಜೋಡಿಸುವುದು, ಸಾಹಿತ್ಯ, ಇತಿಹಾಸ, ಐತಿಹ್ಯ, ಹಳೆಯ ನೆನಪುಗಳು, ಹಳೆಯ ವಸ್ತುಗಳು, ನಂಬಿಕೆಗಳು, ಕೊಡುಗೆಗಳನ್ನು ನೆನಪಿಸುವ ಸದುದ್ದೇಶದೊಂದಿಗೆ ಹಮ್ಮಿಕೊಂಡ ಭಕ್ತಿಗೀತೆ ರಚನಾ ಸ್ಪರ್ಧೆ' ಯ ಫಲಿತಾಂಶವನ್ನು ಪ್ರಕಟಿಸಲಾಯಿತು. ನಾಡಿನ ವಿವಿಧ ಪ್ರದೇಶಗಳಿಂದ ಒಟ್ಟು 105 ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಡಾ. ಬೇ.ಸೀ. ಗೋಪಾಲಕೃಷ್ಣ ಭಟ್, ಸುಂದರ ಬಾರಡ್ಕ ಹಾಗೂ ಡಾ. ಶ್ರೀಶ ಪಂಜಿತ್ತಡ್ಕ ತೀರ್ಪುಗಾರರಾಗಿ ಸಹಕರಿಸಿದ್ದರು. ಎ.ಪಿ. ಉಮಾಶಂಕರಿ ಮರಿಕೆ ಪ್ರಥಮ, ವಿ.ಬಿ.ಕುಳಮರ್ವ ದ್ವಿತೀಯ, ಜಯಲಕ್ಷ್ಮೀ ಜೋಷಿ ತೃತೀಯ ಬಹುಮಾನ ಪಡೆದಿದ್ದಾರೆ. ವಾಸುದೇವ ಭಟ್ ಶೇಡಿಗುಮ್ಮೆ ಅವರಿಗೆ ಗೌರವ ಬಹುಮಾನಕ್ಕೆ ಆಯ್ಕೆಮಾಡಲಾಗಿದೆ. ಸ್ಪರ್ಧೆಗೆ ಬಂದ ಎಲ್ಲಾ ಕವನಗಳನ್ನು ಸೇರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಬೇರೆ ಬೇರೆ ರಾಜ್ಯಗಳಲ್ಲಿ ನೆಲೆಸಿರುವ ಕವಿಗಳು ಕನ್ನಡ, ತುಳು, ಮಲಯಾಳ ಭಾಷೆಗಳಲ್ಲಿ ಕವನಗಳನ್ನು ಬರೆದು ನೀಡಿದ್ದರು. ಇದೇ ಏಪ್ರಿಲ್ 17 ರಿಂದ ಏ.28ರ ತನಕ ಬ್ರಹ್ಮಕಲಶೋತ್ಸವವು ನಡೆಯಲಿದೆ.
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ-ಭಕ್ತಿಗೀತೆ ರಚನಾ ಸ್ಪರ್ಧೆಯ ಫಲಿತಾಂಶ ಪ್ರಕಟ
0
ಫೆಬ್ರವರಿ 21, 2026
Tags

.jpg)
