ಕಾಸರಗೋಡು: ನಗರಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ49.14ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದು, ಕೊಲ್ಲಂಗಾನ ನಿವಾಸಿ ಮಹಮ್ಮದ್ ರಫೀಕ್ ಎಂಬಾತನನ್ನು ಬಂಧಿಸಿದ್ದಾರೆ. ಎಸ್.ಐ ಸಿ.ಆರ್ ಮೌಶಿಮ್ ನೇತೃತ್ವದ ಪೊಲೀಸರ ತಂಡ ಸರ್ಕಾರಿ ಕಾಲೇಜು ಸನಿಹ ವಾಹನ ತಪಾಸಣೆ ನಡೆಸುವ ಮಧ್ಯೆ ಆಗಮಿಸಿದ ಕಾರಿಗೆ ಸೂಚನೆ ನಿಡಿದರೂ, ನಿಲ್ಲಿಸದೆ ಪರಾರಿಯಾಗಲೆತ್ನಿಸಿದಾಗ ಹಿಂಬಾಲಿಸಿ ತಪಾಸಣೆ ನಡೆಸಿದಾಗ ಮಹಮ್ಮದ್ ರಫೀಕ್ ಕೈಯಲ್ಲಿದ್ದ ಎಂಡಿಎಂಎ ಹಾಗೂ ಸಂಚಾರಕ್ಕೆ ಬಳಸಿದ್ದ ವಾಹನ ವಶಪಡಿಸಿಕೊಂಡಿದ್ದಾರೆ.


