ಕಾಸರಗೋಡು: ಪಾಶ್ರ್ವವಾಯು ರೋಗಿಗಳ ಅತ್ಯುತ್ತಮ ನಿರ್ವಹಣೆ'ಗಾಗಿ ಕಾಸರಗೋಡಿನ ವಿನ್‍ಟಚ್ ಆಸ್ಪತ್ರೆಗೆ 2026 ರ ಕೊನೆಯ ತ್ರೈಮಾಸಿಕದಲ್ಲಿ ವಿಶ್ವ ಪಾಶ್ರ್ವವಾಯು ಸಂಸ್ಥೆ (ಡಬ್ಲ್ಯೂಎಸ್‍ಓ) 'ಡಬ್ಲ್ಯೂಎಸ್‍ಓ ಏಂಜಲ್ಸ್ ಪ್ರಶಸ್ತಿ' ಲಭಿಸಿರುವುದಾಗಿ ವಿನ್‍ಟಚ್ ನ್ಯೂರೋಸೈನ್ಸ್‍ನ ನರವಿಜ್ಞಾನಿ ಡಾ. ಮುಹಮ್ಮದ್ ಶಮೀಮ್ ಕಟ್ಟತ್ತಡ್ಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
2024 ರಲ್ಲಿ, ವಿನ್‍ಟಚ್ ಆಸ್ಪತ್ರೆ ಡಬ್ಲ್ಯೂಎಸ್‍ಓ ಪ್ಲಾಟಿನಂ ಪ್ರಶಸ್ತಿಯನ್ನು ಪಡೆದುಕೊಂಡಿದ್ದರೆ, 2025 ರಲ್ಲಿ, ಡಬ್ಲ್ಯೂಎಸ್‍ಓ ಅತ್ಯುನ್ನತ ಏಂಜಲ್ಸ್ ಪ್ರಶಸ್ತಿ' (ವಜ್ರ ವರ್ಗ) ವನ್ನು ಪಡೆದುಕೊಂಡಿದೆ.
ಕಣ್ಣೂರು, ಕಾಸರಗೋಡು, ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸತತ 3 ವರ್ಷಗಳಿಂದ ಈ ಸಾಧನೆಯನ್ನು ಕೈಗೊಂಡಿರುವ ಮೊದಲ ಆಸ್ಪತ್ರೆಯಾಗಿ ವಿನ್‍ಟಚ್ ಆಸ್ಪತ್ರೆಯನ್ನು ಗುರುತಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಮುನಾವರ್ ಡ್ಯಾನಿಶ್, ಸಿಇಓ ಮತ್ತು ನಿರ್ದೇಶಕ ಟಿ.ಪಿ. ರಂಜಿತ್ ಮತ್ತು ಆಪರೇಶನ್ ಹೆಡ್ ಐಶ್ವರ್ಯ ಅಶೋಕನ್ ಉಪಸ್ಥಿತರಿದ್ದರು.



