ಟೆಹರಾನ್: ಮಧ್ಯಪ್ರಾಚ್ಯ ಯುದ್ಧ 15ನೇ ದಿನವನ್ನು ಪ್ರವೇಶಿಸುತ್ತಿರುವಂತೆಯೇ, ದೇಶದಾದ್ಯಂತ ಕನಿಷ್ಠ 56 ವಸ್ತು ಸಂಗ್ರಹಾಲಯಗಳು ಮತ್ತು ಚಾರಿತ್ರಿಕ ತಾಣಗಳು ಹಾನಿಗೊಂಡಿವೆ ಎಂದು ಇರಾನ್‍ನ ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸೋದ್ಯಮ ಸಚಿವಾಲಯ ಶನಿವಾರ ಹೇಳಿದೆ.
ಟೆಹ್ರಾನ್‍ನಲ್ಲಿ ಯುನೆಸ್ಕೋ ಪಟ್ಟಿಯಲ್ಲಿರುವ ಗೊಲೆಸ್ತಾನ್ ಅರಮನೆ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹಾನಿಗೊಂಡಿದೆ. ಟೆಹ್ರಾನ್‍ನಲ್ಲಿ ಕನಿಷ್ಠ 19 ಐತಿಹಾಸಿಕ ತಾಣಗಳು ಹಾನಿಗೊಂಡಿವೆ. ಬುಶೆಹರ್ ಪ್ರಾಂತದ ಸಿರಾಫ್ ಬಂದರಿನಲ್ಲಿ ಅನೇಕ ಶತಮಾನಗಳಷ್ಟು ಹಳೆಯ ಹಲವು ಮನೆಗಳಿಗೆ ಹಾನಿಯಾಗಿದೆ. ಇರಾನ್, ಇಸ್ರೇಲ್ ಮತ್ತು ಲೆಬನಾನಿನಲ್ಲಿ ನೂರಾರು ಐತಿಹಾಸಿಕ ತಾಣಗಳು ಯುದ್ಧದಿಂದ ಹಾನಿಗೊಳಗಾಗಿರುವ ಬಗ್ಗೆ ವಿಶ್ವಸಂಸ್ಥೆಯ ಸಂಸ್ಕೃತಿ ಸಂಸ್ಥೆ ಯುನೆಸ್ಕೋ ಕಳವಳ ವ್ಯಕ್ತಪಡಿಸಿದೆ.

