HEALTH TIPS

ಮಾನ್ಯದಲ್ಲಿ ಪ್ರಜಾಪಿತ ಬ್ರಹ್ಮನ 90ನೇ ಜನ್ಮ ದಿನಾಚರಣೆ-ಸತ್ಸಂಗ

ಬದಿಯಡ್ಕ: ಅರಿವಿಹಿಂತ ದೊಡ್ಡ ಗುರು ಬೇರೊಂದಿಲ್ಲ. ಎಲ್ಲಾ ಭಾವ ತೊಳಲಾಟ, ಮನಸ್ಸಿನ ಎಲ್ಲಾ ಕ್ಷೋಭೆಗಳನ್ನು ಮರೆತು ತಾನು ಯಾರೆಂಬ ರಹಸ್ಯ ಭೇದಿಸಿದಾಗ ಬದುಕು ಸಾಥ್ರ್ಯಕ್ಯ ಗಳಿಸುತ್ತದೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಕಾಸರಗೋಡು ವಲಯ ಸಂಯೋಜಕಿ ಬಿ.ಕೆ.ವಿಜಯಲಕ್ಷ್ಮೀ ತಿಳಿಸಿದರು.

ನೀರ್ಚಾಲು ಸಮೀಪದ ಮಾನ್ಯದಲ್ಲಿ ಬ್ರಹ್ಮಕುಮಾರೀಸ್ ಈಶ್ವರೀಯ ವಿದ್ಯಾಲಯದ ಸ್ಥಳೀಯ ಘಟಕದ ನೇತೃತ್ವದಲ್ಲಿ ಭಾನುವಾರ ಪ್ರಜಾಪಿತ ಬ್ರಹ್ಮಕುಮಾರೀಸ್ ಸಂಸ್ಥಾಪಕ ಪ್ರಜಾಪಿತ ಬ್ರಹ್ಮ ಅವರ 90ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಸಂದೇಶ ನೀಡಿದರು.


ಇಂದಿನ ಒತ್ತಡದ ಜೀವನದಿಂದ ಪಾರಾಗಲು, ಟೆನ್ಷನ್ ರಹಿತವಾಗಲು ಅಟೆಕ್ಷನ್ ಜೀವನವೇ ಸೂತ್ರವಾಗಿದೆ. ಆಧ್ಯಾತ್ಮದ ಶಕ್ತಿ ಅಂತಹ ನೆಮ್ಮದಿ ನೀಡುತ್ತದೆ. ವಿಜ್ಞಾನವು ವಸ್ತು, ಸೌಲಭ್ಯಗಳನ್ನು ಒದಗಿಸಬಹುದು. ಆದರೆ ನೆಮ್ಮದಿಗೆ ಈಶ್ವರನ ಅನುಗ್ರಹವೊಂದೇ ಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಬದಿಯಡ್ಕ ಗ್ರಾ.ಪಂ.ಸದಸ್ಯ ಶ್ಯಾಮಪ್ರಸಾದ ಮಾನ್ಯ, ಗೋವಿಂದ ನಾಯ್ಕ, ಬಾಲಗೋಕುಲ ಮಾನ್ಯ ಸಮಿತಿ ಸಂಚಾಲಕ ಮಧುಚಂದ್ರ ಮಾನ್ಯ, ವೈದ್ಯೆ ಡಾ.ಮಮತಾ ಮಂಗಳೂರು, ಪತ್ರಕರ್ತ ಪುರುಷೋತ್ತಮ ಭಟ್.ಕೆ. ಉಪಸ್ಥಿತರಿದ್ದು ಶುಭಹಾರೈಸಿ ಮಾತನಾಡಿದರು.


ಬ್ರಹ್ಮಕುಮಾರೀಸ್ ಮಾನ್ಯ ಘಟಕದ ಸಂಚಾಲಕ ಎಂ.ಎಚ್.ಜನಾರ್ದನ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಬ್ರಹ್ಮಕುಮಾರ ಡಾ.ಸುಬ್ರಹ್ಮಣ್ಯ ವಂದಿಸಿದರು. ಬಿ.ಕೆ.ಕವಿತಾ ಕಾರ್ಯಕ್ರಮ ನಿರೂಪಿಸಿದರು. ಬಿ.ಕೆ.ರೇಷ್ಮಾ ಸಂಸ್ಥೆಯ ಬಗ್ಗೆ ಮಾತನಾಡಿದರು.ಕೃಪಾ ಮತ್ತು ಕೀರ್ತಿ ಸ್ವಾಗತ ನೃತ್ಯ ಪ್ರಸ್ತುತಪಡಿಸಿದರು. ಬಿ.ಕೆ.ಮಂಗಳಾ, ಬಿಂದು, ಮೊದಲಾದವರು ಸಹಕರಿಸಿದರು. ಇದಕ್ಕೂ ಮೊದಲು ಧ್ವಜಾರೋಹಣ, ಬಿ.ಕೆ.ವಿಜಯಲಕ್ಷ್ಮೀ ಅವರಿಂದ ರಾಜಯೋಗದ ಬಗ್ಗೆ ತರಗತಿ ನಡೆಯಿತು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries