HEALTH TIPS

ತೈಲ ಸರಬರಾಜು ಬಿಕ್ಕಟ್ಟು | ಭಾರತಕ್ಕೆ 9.5 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲ ರಫ್ತು ಮಾಡಲಿರುವ ರಷ್ಯಾ

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಉದ್ವಿಗ್ನತೆಯಿಂದ ಉದ್ಭವಿಸಿರುವ ತೈಲ ಸರಬರಾಜು ಬಿಕ್ಕಟ್ಟನ್ನು ನಿರ್ವಹಿಸಲು ಭಾರತಕ್ಕೆ 9.5 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಪೂರೈಸಲು ರಷ್ಯಾ ಸಿದ್ಧವಾಗಿದ್ದು, ಇನ್ನು ಕೆಲವೇ ವಾರಗಳಲ್ಲಿ ಭಾರತಕ್ಕೆ ಕಚ್ಚಾ ತೈಲದ ದಾಸ್ತಾನು ಆಗಮಿಸಲಿದೆ ಎಂದು ಈ ಕುರಿತು ಅರಿವಿರುವ ವಿಶ್ವಾಸಾರ್ಹ ಉದ್ಯಮ ಮೂಲವೊಂದು ತಿಳಿಸಿದೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮೂಲತಃ ರಷ್ಯಾದದ್ದಲ್ಲದ ಸರಕು ಸಾಗಣೆ ಹಡಗುಗಳು ಭಾರತದತ್ತ ಹೊರಟಿವೆಯೆ ಎಂಬ ಕುರಿತು ತಿಳಿಸಲು ನಿರಾಕರಿಸಿರುವ ಮೂಲವು, ಇನ್ನು ಕೆಲವೇ ವಾರಗಳಲ್ಲಿ ತೈಲ ಸರಕು ಭಾರತಕ್ಕೆ ಪೂರೈಕೆಯಾಗಲಿದೆ ಎಂದು ಹೇಳಿದೆ. ಇದರಿಂದ ತೈಲ ಸಂಸ್ಕರಣಾ ಘಟಕಗಳು ನಿಟ್ಟುಸಿರು ಬಿಡುವಂತಾಗಿದೆ.

ಕೇವಲ 25 ದಿನಗಳ ಬೇಡಿಕೆಯನ್ನು ಪೂರೈಸುವಷ್ಟು ತೈಲ ಸಂಗ್ರಹ ಹೊಂದಿರುವ ಭಾರತ ಸರಬರಾಜು ಆಘಾತದಿಂದ ದುರ್ಬಲಗೊಂಡಿದ್ದು, ಸಂಸ್ಕರಣಾ ಘಟಕಗಳೂ ಕೂಡ ಸೀಮಿತ ಪ್ರಮಾಣದ ಗ್ಯಾಸ್ ಆಯಿಲ್, ಗ್ಯಾಸೊಲಿನ್ ಹಾಗೂ ಎಲ್‌ಪಿಜಿ ದಾಸ್ತಾನನ್ನು ಹೊಂದಿವೆ.

ಮಧ್ಯಪ್ರಾಚ್ಯದಲ್ಲಿ ಇನ್ನೂ 10-15 ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇರುವ ಬಿಕ್ಕಟ್ಟನ್ನು ಎದುರಿಸಲು ಭಾರತ ಪರ್ಯಾಯ ಸರಬರಾಜಿನ ಹುಡುಕಾಟ ನಡೆಸುತ್ತಿದೆ ಎಂದೂ ಸರ್ಕಾರಿ ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries