ಬದಿಯಡ್ಕ: ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದ ನವೀಕರಣ ಪುನಃಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಶ್ರೀದೇವರ ಛಾಯಾಚಿತ್ರ ಪ್ರತಿಷ್ಠೆ ಕಲಶಾಭಿಷೇಕ ಸೋಮವಾರ 10.59ರ ವೃಷಭಲಗ್ನ ಸುಮುಹೂರ್ತದಲ್ಲಿ ಪರಮಪೂಜ್ಯ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಅನುಗ್ರಹದೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಶಿವಶಂಕರ ಭಟ್ ಕಿಳಿಂಗಾರು ಇವರಿಂದ ನೆರವೇರಿತು.
ಪೂರ್ವಭಾವಿಯಾಗಿ ಪ್ರಾತಃಕಾಲ ಗಣಪತಿ ಹೋಮ, ಪ್ರತಿಷ್ಠಾ ಹವನ, ಕಲಶಪೂಜೆ ಜರಗಿತು. ವಿವಿಧ ಭಜನಾ ಸಂಘಗಳಿಂದ ಭಜನಾ ಸೇವೆ ಜರಗಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಕಲಶಪ್ರೋಕ್ಷಣೆ ನಡೆಯಿತು. ಮಂದಿರ ಅರ್ಚಕ ಸುಬ್ರಹ್ಮಣ್ಯ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಭಟ್ ಖಂಡಿಗೆ, ಭಗವದ್ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.



