HEALTH TIPS

ಇಸ್ರೇಲ್‌-ಇರಾನ್‌ ಯುದ್ಧದ ಪರಿಣಾಮ: ಭಾರತೀಯ ನಾವಿಕರಿಗೆ ಆಹಾರ, ನೀರಿನ ಕೊರತೆ

ಲಂಡನ್‌: ಅಮೆರಿಕ ಹಾಗೂ ಇಸ್ರೇಲ್‌ ಜಂಟಿಯಾಗಿ ಇರಾನ್‌ ವಿರುದ್ಧ ಆರಂಭಿಸಿರುವ ಯುದ್ಧವು ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಹಡಗುಗಳು ಕೊಲ್ಲಿ ರಾಷ್ಟ್ರಗಳಲ್ಲಿಯೇ ಸಿಲುಕಿಕೊಂಡಿವೆ. ಇದರಿಂದ ಹಡಗಿನಲ್ಲಿ ಕೆಲಸ ಮಾಡುವ ನಾವಿಕರು ಆಹಾರ ಹಾಗೂ ಶುದ್ಧ ಕುಡಿಯುವ ನೀರಿನ ಕೊರತೆ ಎದುರಿಸುವಂತಾಗಿದೆ.

'ನಮ್ಮ ಹಡಗಿನಲ್ಲಿ ಅಗತ್ಯಕ್ಕೆ ಬೇಕಾದಷ್ಟು ನೀರಿಲ್ಲ. ಕೆಲವು ದಿನಗಳ ಹಿಂದಷ್ಟೇ ಒಂದಿಷ್ಟು ಆಹಾರ ಸಿಕ್ಕಿದೆ' ಎಂದು ಇರಾನ್‌ನ ಕರಾವಳಿಯಲ್ಲಿ ಸಣ್ಣ ಬೋಟಿನಲ್ಲಿ ಸಿಲುಕಿರುವ ಭಾರತದ ನಾವಿಕರೊಬ್ಬರು ತಿಳಿಸಿದ್ದಾರೆ.

'ನಿನ್ನೆಯ ತನಕವೂ ನಮಗೆ ಕುಡಿಯಲು ಹಾಗೂ ಸ್ನಾನ ಮಾಡಲು ಶುದ್ಧ ಕುಡಿಯುವ ನೀರು ಲಭ್ಯವಾಗುತ್ತಿತ್ತು. ಈಗ ಕುಡಿಯುವ ನೀರು ಮುಗಿದಿದೆ. ನಾವು ಈಗ ಮಾಲೀಕರನ್ನು ಸಂಪರ್ಕಿಸಿದ್ದು, ನಾಳೆ ಅಥವಾ ನಾಡಿದ್ದು ಲಭ್ಯವಾಗುವ ನಿರೀಕ್ಷೆಯಿದೆ' ಎಂದು ಅವರು ತಿಳಿಸಿದ್ದಾರೆ.

'ಅಲ್ಲಿಯವರೆಗೂ ನಾವು ನೀರನ್ನು ಕುದಿಸಿ ಇಡುತ್ತೇವೆ' ಎಂದು ನಾವಿಕ ಪೆರಿರಾ ಮಾಹಿತಿ ನೀಡಿದ್ದಾರೆ.

ಹೊರ್ಮುಜ್‌ ಜಲಸಂಧಿಯಲ್ಲಿ ಅಂದಾಜು 3,200 ಹಡಗುಗಳು ಸಿಲುಕಿವೆ, ಇವುಗಳಲ್ಲಿನ 20 ಸಾವಿರಕ್ಕೂ ಅಧಿಕ ಸಿಬ್ಬಂದಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಸಮುದ್ರಯಾನ ಸಂಘಟನೆ(ಐಎಂಒ) ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries