ಕಾಸರಗೋಡು: ಭಗವಾನ್ ಶ್ರೀ ಸತ್ಯಸಾಯಿಬಾಬಾ ಅವರ ಜನ್ಮಶತಮಾನೋತ್ಸವದ ಅಂಗವಾಗಿ ನಾಡಿನಾದ್ಯಂತ ಸಂಚರಿಸುತ್ತಿರುವ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಗೆ ಕಾಸರಗೋಡು ತಾಳಿಪಡ್ಪು ಸತ್ಯಸಾಯಿ ಅಭಯನಿಕೇತನ ವತಿಯಿಂದ ಅದ್ದೂರಿ ಸ್ವಾಗತ ನೀಡಲಾಯಿತು.
ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಿಂದ ರಥಯಾತ್ರೆ ಬರಮಾಡಿಕೊಮಡು, ತಾಳಿಪಡ್ಪು ಸತ್ಯಸಾಯಿ ಅಭ್ಯಯನಿಕೇತನ ವರೆಗೆ ಮೆರವಣಿಗೆ ಮೂಲಕ ತೆರಳಲಾಯಿತು. ನಂತರ ಪಾದುಕಾ ದರ್ಶನ, ಸತ್ಸಂಗ ನಡೆಯಿತು. ಈ ಸಂದರ್ಭ ನಡೆದ ಧರ್ಮ ಸಭೆಯಲ್ಲಿ ಶ್ರೀ ಸತ್ಯಸಾಯಿ ಸೇವಾ ಕರ್ನಾಟಕ ಸಂಸ್ಥಾನ ಸಂಯೋಜಕ ಜಗನ್ನಾಥ ನಾಡಿಗೇರ ಆಶಯ ಭಾಷಣ ಮಾಡಿದರು. ಸತ್ಯಸಾಯಿ ಜಿಲ್ಲಾಧ್ಯಕ್ಷ ಎಚ್.ಮಹಾಲಿಂಗ ಭಟ್, ತಾಳಿಪಡ್ಪು ಶ್ರೀ ಸತ್ಯಸಾಯಿ ಅಭಯನಿಕೇತನ ಅಧ್ಯಕ್ಷ ಡಾ. ಎಸ್.ಬಿ ಖಂಡಿಗೆ, ಕಾರ್ಯದರ್ಶಿ ಪಿ.ಲತಾ, ಮನೋಹರ ನಾಯಕ್, ಪಿ.ವೃಂದಾ, ಕವಿತಾ ವಿ.ರಾವ್, ಸಿ.ಎನ್.ರಾಮಕೃಷ್ಣ, ಅಶೋಕ್ ಬೆಂಗಳೂರು ಮೊದಲಾದವರು ಪಾಲ್ಗೊಂಡಿದ್ದರು. ಅಭಯನಿಕೇತನ ಜತೆ ಕಾರ್ಯದರ್ಶಿ ಬಿ.ಪ್ರೇಂಪ್ರಕಾಶ್ ಸ್ವಾಗತಿಸಿದರು. ಕಾರ್ಯಕ್ರಮದ ಅಂಗವಾಗಿ ಭಜನೆ, ಬೆಳಗ್ಗೆ ಓಂಕಾರ, ಸುಪ್ರಭಾತ, ನಾಗರ ಸಂಗೀತ, ಪಾದುಕಾ ಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು.

