ಬದಿಯಡ್ಕ: ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದ ನವೀಕರಣ ಪುನಃಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಶನಿವಾರ ಅಪರಾಹ್ನ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಜರಗಿತು. ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಿಂದ ಹೊರಟು ಬದಿಯಡ್ಕ ಪೇಟೆಯಲ್ಲಿ ಸಾಗಿ ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾ ಮಂದಿರಕ್ಕೆ ಆಗಮಿಸಿ ನೀರ್ಚಾಲು ಪೇಟೆಯ ಮೂಲಕ ಶ್ರೀ ಕುಮಾರಸ್ವಾಮಿ ಭಜನಾ ಮಂದಿರಕ್ಕೆ ತಲುಪಿತು.
ಕೇರಳೀಯ ಚೆಂಡೆಮೇಳದೊಂದಿಗೆ ನೂರಾರು ಭಗವದ್ಭಕ್ತರು ಪಾಲ್ಗೊಂಡಿದ್ದ ಮೆರವಣಿಗೆಯಲ್ಲಿ ಪುಟಾಣಿ ಮಕ್ಕಳು ರಾಧಾಕೃಷ್ಣ, ಸುಬ್ರಹ್ಮಣ್ಯ ವೇಷ ಧರಿಸಿದ ಮಕ್ಕಳು, ಮಾತೆಯರು ಮುತ್ತುಕೊಡೆಗಳೊಂದಿಗೆ ಮೆರುಗು ತಂದರು. ಮಾರ್ಚ್ 1 ರಂದು ಭಾನುವಾರ ಪ್ರಾತಃಕಾಲ 6ಕ್ಕೆ ಗಣಪತಿ ಹೋಮ, ದೀಪ ಪ್ರತಿಷ್ಠೆ, ಧಾರ್ಮಿಕ ಮುಂದಾಳು ಪಿ.ಎಸ್.ಗೋಪಾಲ ಭಟ್ ಪಟ್ಟಾಜೆ ಇವರಿಂದ ದೀಪ ಪ್ರಜ್ವಲನೆ ನಡೆಯಿತು. ಬಳಿಕ ವಿವಿಧ ಭಜನಾ ಸಂಘಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಭೋಜನ ಪ್ರಸಾದ ನಡೆಯಿತು. ಮಧ್ಯಾಹ್ನ 1ಕ್ಕೆ ಜ್ಯೋತಿಷ್ಯ ವಿದ್ವಾನ್ ವೆಂಕಟೇಶ್ವರ ಭಟ್ ಕುಂಜಾರು ಮೈಸೂರು ಇವರಿಂದ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಿತು. 1.15 ರಿಂದ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಇವರ ಶಿಷ್ಯವೃಂದ ಶ್ರೀ ಕುಮಾರಸ್ವಾಮಿ ಯಕ್ಷಗಾನ ಕಲಾಕೇಂದ್ರ ನೀರ್ಚಾಲು ಇವರಿಂದ ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ ಇವರ ಸಹಕಾರದೊಂದಿಗೆ ಯಕ್ಷಗಾನ ಬಯಲಾಟ ನಡೆಯಿತು. ಸಂಜೆ 3.50ಕ್ಕೆ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಗಳವರ ಆಗಮನ, ಪೂರ್ಣಕುಂಭ ಸ್ವಾಗತ, 4ಕ್ಕೆ ಧಾರ್ಮಿಕ ಸಭೆಯಲ್ಲಿ ಶ್ರೀಗಳಿಂದ ಆಶೀರ್ವಚನ ನಡೆಯಿತು. ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಇವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಶಿವಶಂಕರ ಭಟ್ ಕಿಳಿಂಗಾರು ಇವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ಮಾ.1 ಮತ್ತು 2ರಂದು ಜರಗುತ್ತಿವೆ.

.jpg)
.jpg)
