HEALTH TIPS

ಅಮೆರಿಕದೊಂದಿಗೆ ಮಾತುಕತೆ ಇಲ್ಲ, ದೀರ್ಘ ಕಾಲ ಯುದ್ಧ ನಡೆಸಲು ಸಿದ್ಧ: ಇರಾನ್‌

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಇರಾನ್‌ ಮಾತುಕತೆಗೆ ಮುಂದಾಗಿದೆ ಎಂಬ ಅಮೆರಿಕದ ಹೇಳಿಕೆಯನ್ನು ಇರಾನ್‌ ಶನಿವಾರ ತಳ್ಳಿಹಾಕಿದೆ. 

ಇರಾನ್‌ ಮಾತುಕತೆಗೆ ಮುಂದಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆಯನ್ನು ಇರಾನ್ ದೇಶದ ಸರ್ವೋಚ್ಚ ನಾಯಕನ ಭಾರತದ ಪ್ರತಿನಿಧಿ ಅಬ್ದುಲ್ ಮಜೀದ್ ಹಕೀಂ ಇಲಾಹಿ ತಳ್ಳಿಹಾಕಿದ್ದಾರೆ.

ಅಗತ್ಯವಿದ್ದರೆ ಇರಾನ್ ಐದು ವರ್ಷಗಳ ಕಾಲ ಯುದ್ಧ ಮುಂದುವರಿಸಲು ಸಿದ್ಧವಿದೆ ಎಂದು ಅವರು ಹೇಳಿದರು.

ಶನಿವಾರ ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಇಲಾಹಿ ಮಾತನಾಡಿದರು. ಅಮೆರಿಕದೊಂದಿಗೆ ಮಾತುಕತೆ ನಡೆಸಲು ಇರಾನ್ ಯಾವುದೇ ಆಸಕ್ತಿ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು. ಮಾತುಕತೆಗಳು ನಡೆಯುತ್ತಿದ್ದಾಗ ಅಮೆರಿಕ ಇರಾನ್‌ ಮೇಲೆ ದಾಳಿ ಮಾಡಿತು, ನಮಗೆ ಯುದ್ಧ ಬೇಕಿರಲಿಲ್ಲ ಅವರೇ ಯುದ್ಧವನ್ನು ಆರಂಭಿಸಿದ್ದು ಎಂದು ಇಲಾಹಿ ಆರೋಪಿಸಿದರು.

ಈ ಯುದ್ಧ ಯಾವಾಗ ಮುಕ್ತಾಯವಾಗಲಿದೆ ಎಂಬುದು ನನಗೆ ತಿಳಿದಿಲ್ಲ, ಇರಾನ್ ಎಂದಿಗೂ ಶರಣಾಗುವುದಿಲ್ಲ, ಕೊನೆಯವರೆಗೂ ಹೋರಾಡಲು ಸಿದ್ಧ ಎಂದು ಅವರು ಹೇಳಿದರು.

ಈ ಹಿಂದೆ ಇರಾನ್ ಮತ್ತು ಇರಾಕ್ ನಡುವೆ ಎಂಟು ವರ್ಷಗಳ ಕಾಲ ಯುದ್ಧ ನಡೆದಿತ್ತು. ಅದನ್ನು ನಾವು ಎದುರಿಸಿದ್ದೇವೆ. ಇರಾನ್ ಬೀದಿಗಳಿಗೆ ಹೋದರೆ ಜನರು ಪ್ರತೀಕಾರದ ಘೋಷಣೆ ಕೂಗುವುದನ್ನು ಕಾಣಬಹುದು, ನಾವು ರಕ್ತ ಕೊಡಲು ಸಿದ್ಧ, ಆದರೆ ನಮ್ಮ ನೆಲವನ್ನು ಬಿಟ್ಟು ಕೊಡುವುದಿಲ್ಲ' ಎಂದು ಜನರು ಹೇಳುತ್ತಿದ್ದಾರೆ ಎಂದು ಅವರು ಹೇಳಿದರು.

ಪಶ್ಚಿಮ ಏಷ್ಯಾದಲ್ಲಿ ಯುದ್ಧ ತಪ್ಪಿಸಲು ಇರಾನ್ ಹಲವು ಬಾರಿ ಪ್ರಯತ್ನಿಸಿತ್ತು, ನೆರೆಯ ದೇಶಗಳಿಗೂ ಯುದ್ಧ ವ್ಯಾಪಿಸದಂತೆ ಪ್ರಯತ್ನಿಸಲಾಯಿತು ಆದರೆ ಅದು ಫಲಕೊಡಲಿಲ್ಲ ಎಂದು ಇಲಾಹಿ ಹೇಳಿದರು.

ಈ ಸಂಘರ್ಷ ಕೇವಲ ಇರಾನ್‌ಗೆ ಸೀಮಿತವಾಗಿಲ್ಲ, ಜಾಗತಿಕ ಮಟ್ಟದಲ್ಲೂ ಪರಿಣಾಮ ಬೀರುತ್ತಿದೆ. ಇಲ್ಲಿ ಉಂಟಾದ ಅಸ್ಥಿರತೆ ತೈಲ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದ್ದು, ಇಂಧನ ಕೊರತೆ ಅಥವಾ ಬೆಲೆ ಏರಿಕೆಗೆ ಕಾರಣವಾಗಿದೆ ಎಂದರು.

ತೈಲ ಕೊರತೆಯಿಂದ ಜನರು ಕಷ್ಟಪಡುವುದು ಇರಾನ್‌ಗೆ ಇಷ್ಟವಿಲ್ಲ, ಆದರೆ ನಮ್ಮನ್ನು ರಕ್ಷಿಸಿಕೊಳ್ಳಲು ಬೇರೆ ಆಯ್ಕೆ ಇಲ್ಲ ಎಂದರು. ಈ ಸಂಘರ್ಷವನ್ನು ಅಂತ್ಯಗೊಳಿಸಲು ಅಮೆರಿಕದ ಮೇಲೆ ಒತ್ತಡ ಹೇರಲು ಜಾಗತಿಕ ನಾಯಕರಲ್ಲಿ ಅವರು ಮನವಿ ಮಾಡಿದರು.


#WATCH | Delhi | Speaking to ANI about the West Asia conflict, Dr Abdul Majid Hakeem Ilahi, representative of Iran’s Supreme Leader in India, says, "We didn't want war... While we were at the negotiation table, they attacked us and initiated this war... These global problems and Show more
31
Reply
Copy link

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries