ಕುಂಬಳೆ: ಬಿಜೆಪಿ ಪುತ್ತಿಗೆ ಪಂಚಾಯತಿ ಮಟ್ಟದ ಚುನಾವಣಾ ತರಬೇತಿ ಕಾರ್ಯಗಾರ ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.
ಪಕ್ಷದ ರಾಜ್ಯ ವಕ್ತಾರ ವಕೀಲ ವಿ.ಪಿ. ಪದ್ಮನಾಭನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಂಚಾಯತಿ ಅಧ್ಯಕ್ಷ ಪುರುಷೋತ್ತಮ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿವಲಯ ಉಪಾಧ್ಯಕ್ಷ ಹಾಗೂ ಮಂಜೇಶ್ವರ ವಿಧಾನಸಭಾ ಚುನಾವಣಾ ಕನ್ವೀನರ್ ವಿಜಯ ರೈ ಮಂಗಲ್ಪಾಡಿ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ರಾಜ್ಯ ಸಮಿತಿ ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ, ಹಿರಿಯರಾದ ಜಯಂತ ಪಾಟಾಳಿ, ಮಹೇಶ್ ಪುಣಿಯೂರು, ಬಾಲಸುಬ್ರಮಣ್ಯ ಭಟ್, ಹರೀಶ್ ಸಿದ್ದಿಬೈಲು, ಲಕ್ಷ್ಮಿ ವಿ ಭಟ್, ಜನಾರ್ದನ ಕಣ್ಣೂರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

.jpg)
.jpg)
