ಕಾಸರಗೋಡು: ಆರೋಗ್ಯ ವಲಯದಲ್ಲಿನ ನವೀನ ತಂತ್ರಜ್ಞಾನಗಳನ್ನು ಚರ್ಚಿಸಲು ಕೇರಳಂ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಕಾರ್ಯಾಗಾರ ನಡೆಯಿತು. ಕೇರಳಂ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿ ಜಂಟಿಯಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ಸಂಶೋಧನಾ ಸಂಸ್ಥೆ ಎಎನ್‍ಆರ್‍ಎಫ್-ಪಿಎಐಆರ್ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವೈದ್ಯಕೀಯ ತಂತ್ರಜ್ಞಾನಗಳ ಕುರಿತಾದ ಕಾರ್ಯಾಗಾರ ಭವಿಷ್ಯದ ಸಂಶೋಧನಾ ಯೋಜನೆಗಳ ಮೌಲ್ಯಮಾಪನಕ್ಕೆ ವೇದಿಕೆಯಾಗಿ ಕಾರ್ಯನಿರ್ವಹಿಸಿತು. ಉಪಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಆರೋಗ್ಯ ಕ್ಷೇತ್ರವು ಇತಿಹಾಸದಲ್ಲಿ ಅತ್ಯಂತ ಪರಿವರ್ತನಾಶೀಲ ಅವದಿಯಲ್ಲಿದ್ದು, ಬಯೋಮೆಡಿಕಲ್ ಎಂಜಿನಿಯರಿಂಗ್, ನ್ಯಾನೊತಂತ್ರಜ್ಞಾನ, ಕೃತಕಬುದ್ಧಿಮತ್ತೆ ಮತ್ತು ವಸ್ತು ವಿಜ್ಞಾನದಲ್ಲಿನ ಪ್ರಗತಿಗಳು ನಾವು ರೋಗವನ್ನು ಪತ್ತೆಹಚ್ಚುವ, ಮೇಲ್ವಿಚಾರಣೆ ಮಾಡುವ ಮತ್ತು ಎದುರಿಸುವ ವಿಧಾನವನ್ನು ಮರುರೂಪಿಸುವಲ್ಲಿ ಮಹತ್ವದ ಹಂತಕ್ಕೆಮುಟ್ಟಿದ್ದೇವೆ. ಇದರ ಹಿಂದಿನ ಪ್ರಮುಖ ಪ್ರೇರಕ ಶಕ್ತಿ ಸಂವೇದಕ ತಂತ್ರಜ್ಞಾನಗಳಲ್ಲಿನ ಪ್ರಗತಿಯಾಗಿದೆ ಎಂದು ತಿಳಿಸಿದರು.
ಭೌತ ವಿಜ್ಞಾನ ಶಾಲೆಯ ಕುಲಸಚಿವ ಪೆÇ್ರ. ವಿ.ಬಿ. ಸಮೀರ್ ಕುಮಾರ್, ಡೀನ್ ಪೆÇ್ರ. ಎ. ಶಕ್ತಿವೇಲ್, ವಿದ್ಯಾರ್ಥಿಗಳ ಕಲ್ಯಾಣ ವಿಭಾಗದ ಡೀನ್ ಪೆÇ್ರ. ರಾಜೇಂದ್ರ ಪಿಲಾಂಗಟ್ಟೆ, ಕಾರ್ಯಕ್ರಮ ಸಂಚಾಲಕಿ ಪೆÇ್ರ. ಸ್ವಪ್ನಾ ಎಸ್. ನಾಯರ್ ಮತ್ತು ಡಾ. ಸುಚಂದ್ ಸಂದೀಪ್ ಉಪಸ್ಥಿತರಿದ್ದರು.



